ಬೆಳಗಾವಿ: ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಮಾಳಮಾರುತಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಇಲ್ಲಿನ ರಾಮನಗರದ ನಿವಾಸಿ ಅಜಯ ಶಾಮ್ ಕಾಗಲಕರ(27) ಬಂಧಿತ ಆರೋಪಿ.
‘ವಡಗಾವಿಯಲ್ಲಿ ನಡೆಯುತ್ತಿರುವ ಮಂಗಾಯಿ ದೇವಿ ಜಾತ್ರೆಗೆ ಬರುವವರು ಹಿಂದೂಗಳ ಬಳಿ ಮಾತ್ರ ವಸ್ತುಗಳನ್ನು ಖರೀದಿಸಬೇಕು ಎಂದು ಅಜಯ ತನ್ನ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿದ್ದ. ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ. ಈ ಹಿಂದೆಯೂ ಈತ ಕೋಮು ಸಾಮರಸ್ಯ ಕೆಡಿಸಲು ಯತ್ನಿಸಿದ ಆರೋಪಗಳಿವೆ. ಹಾಗಾಗಿ ಬಂಧಿಸಿದ್ದೇವೆ’ ಎಂದು ಮಾಳಮಾರುತಿ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ‘ಪ್ರಜಾವಾಣಿ’ಗೆ ತಿಳಿಸಿದರು.
–––––––
ಜೂಜು: ಇಬ್ಬರ ಬಂಧನ
ಬೆಳಗಾವಿ: ಇಲ್ಲಿನ ರುಕ್ಮಿಣಿ ನಗರದ ಸಾರ್ವಜನಿಕ ಸ್ಥಳದಲ್ಲಿ ಜೂಜೂಟಾದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ರುಕ್ಮಿಣಿ ನಗರದ ನಿವಾಸಿಗಳಾದ ಪ್ರದೀಪ ಹಣ್ಣಿಕೇರಿ, ಕಿರಣಸಿಂಗ್ ಸಿಖಸರದಾರಜಿ ಬಂಧಿತರು. ಅವರಿಂದ ₹500 ವಶಕ್ಕೆ ಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.