ಬಂಧನ
ಬೆಳಗಾವಿ: ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಇಟ್ಟುಕೊಂಡು ಸಂಚರಿಸುವವರ ವಿರುದ್ಧ ನಗರ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಸಂಶಯಾಸ್ಪದ ವ್ಯಕ್ತಿಗಳ ವಾಹನಗಳನ್ನು ತಪಾಸಿಸುತ್ತಿದ್ದಾರೆ.
ಇಲ್ಲಿನ ಮಜಗಾವಿ ಕ್ರಾಸ್‌ನಲ್ಲಿ ಮಜಗಾವಿಯ ವಾಲ್ಮೀಕಿ ಗಲ್ಲಿಯ ಮಂಜು ಸಿತಿಮಣಿ(27) ಎಂಬಾತನನ್ನು ಉದ್ಯಮಬಾಗ್ ಠಾಣೆ ಪೊಲೀಸರು ಶನಿವಾರ ಬಂಧಿಸಿ, ಇನ್ನೋವಾ ಕಾರು, ಅದರಲ್ಲಿದ್ದ ಖಡ್ಗ ಮತ್ತು ಕೊಡಲಿ ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ನಗರದಲ್ಲಿನ ಸಾಂಬ್ರಾ ಕೆಳಸೇತುವೆ ಬಳಿ ಹೊಸ ಗಾಂಧಿ ನಗರದ ಅಪ್ಪಾರ ಶೇಖ್(42) ಎಂಬಾತನನ್ನು ಮಾಳಮಾರುತಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿ, ದ್ವಿಚಕ್ರ ವಾಹನ ಮತ್ತು ಅದರ ಲಾಕರ್‌ನಲ್ಲಿದ್ದ ಶಸ್ತ್ರಾಸ್ತ್ರ ವಶಕ್ಕೆ ಪಡೆದಿದ್ದಾರೆ.
ಹೆರಾಯಿನ್ ವಶ: ಶಾಹೂ ನಗರದ ಕೆರೆ ಬಳಿ ರೌಡಿಶೀಟರ್ ರಾಹುಲ್ ಜಾಧವ ಎಂಬಾತನನ್ನು ಎಪಿಎಂಸಿ ಠಾಣೆ ಪೊಲೀಸರು ಶನಿವಾರ ಬಂಧಿಸಿ, ದ್ವಿಚಕ್ರ ವಾಹನದಲ್ಲಿದ್ದ 2.20 ಗ್ರಾಂ ಹೆರಾಯಿನ್(24 ಪ್ಯಾಕೆಟ್) ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.