
ಚನ್ನಮ್ಮನ ಕಿತ್ತೂರು: ಚನ್ನಮ್ಮನ ಕಿತ್ತೂರು ಮತ್ತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಒಡೆದು ಚಿನ್ನ, ಬೆಳ್ಳಿ ಆಭರಣ ಕದ್ದಿದ್ದ ಒಬ್ಬ ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದ ಮಹಾದೇವ ನಾರಾಯಣ ಧಾಮಣಿಕರ(26) ಬಂಧಿತ. ಆತನಿಂದ ₹20.30 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಎಂ.ಕೆ.ಹುಬ್ಬಳ್ಳಿಯ ವಿದ್ಯಾನಗರದ ಕಲ್ಲಪ್ಪ ಕರವಿನಕೊಪ್ಪ ಅವರ ಮನೆ ಕಳ್ಳತನ ಪ್ರಕರಣ ಬೆನ್ನಟ್ಟಿದ್ದ ಪೊಲೀಸರು ಈ ಆರೋಪಿ ಬಂಧಿಸುವ ಮೂಲಕ, ಇಲ್ಲಿನ ಮೂರು ಮತ್ತು ಧಾರವಾಡ ಗ್ರಾಮೀಣ ಠಾಣೆಯ ಎರಡು ಕಳ್ಳತನ ಪ್ರಕರಣ ಭೇದಿಸಿದ್ದಾರೆ’ ಎಂದು ಡಿವೈಎಸ್‌ಪಿ ವೀರಯ್ಯ ಮಠಪತಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಸಿಪಿಐ ಶಿವಾನಂದ ಗುಡಗನಟ್ಟಿ, ಎಸ್ಐ ಪ್ರವೀಣ ಗಂಗೋಳ, ಅಪರಾಧ ವಿಭಾಗದ ಎಸ್ಐ ಪ್ರವೀಣ ಕೋಟಿ, ಸಿಬ್ಬಂದಿಗಳಾದ ಎಸ್.ಎ.ದಫೇದಾರ, ಎನ್.ಆರ್.ಗಳಗಿ, ಎ.ಎಂ.ಚಿಕ್ಕೇರಿ, ಎಸ್.ಎಂ.ಪೆಂಟೇದ, ಯಾಸಿನ್ ನದಾಫ್, ಆರ್.ಎಸ್.ಶೀಲಿ, ಎಸ್.ಬಿ.ಹುಣಸೀಕಟ್ಟಿ, ಎ.ಡಿ.ಹಣ್ಣಿಕೇರಿ, ಎಂ.ವಿ.ಮನ್ನಪ್ಪನವರ, ಸಿ.ಎಸ್.ಚಿಕ್ಕಮಠ, ಎಸ್.ಆರ್.ಪಾಟೀಲ, ಬಿ.ಎಸ್.ಚುಂಚನೂರ, ಕೆ.ಎಸ್.ಮಧುರ, ಎಂ.ಎಸ್.ಭೈರನಟ್ಟಿ, ನಂದಗಡ ಠಾಣೆಯ ಎಸ್.ಜಿ.ಉಡಕೇರಿ, ಎಸ್.ಐ.ತುರಮಂದಿ, ಬೆರಳಚ್ಚು ತಜ್ಞರಾದ ಪಿಐ ತಬರೇಜ್ ಬಾಗವಾನ, ಸಿಬ್ಬಂದಿ ಮಲಗೌಡ ಪಾಟೀಲ, ವಿನೋದ ಟಕ್ಕಣ್ಣವರ, ಸಚಿನ ಪಾಟೀಲ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.