ADVERTISEMENT

ಸಿ.ಎಸ್.ಸಿ. ಸೇವಾದಾರರ ಪ್ರೇರಣಾ ಸಭೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 5:33 IST
Last Updated 17 ಜುಲೈ 2025, 5:33 IST
ಹುಕ್ಕೇರಿಯಲ್ಲಿ ತಾಲ್ಲೂಕು ಮಟ್ಟದ ಸಿ.ಎಸ್.ಸಿ. ಸೇವಾದಾರರ ಪ್ರೇರಣಾ ಸಭೆಯನ್ನು ಗಣ್ಯರು ಉದ್ಘಾಟಿಸಿದರು.
ಹುಕ್ಕೇರಿಯಲ್ಲಿ ತಾಲ್ಲೂಕು ಮಟ್ಟದ ಸಿ.ಎಸ್.ಸಿ. ಸೇವಾದಾರರ ಪ್ರೇರಣಾ ಸಭೆಯನ್ನು ಗಣ್ಯರು ಉದ್ಘಾಟಿಸಿದರು.   

ಹುಕ್ಕೇರಿ: ಸಾಮಾನ್ಯ ಸೇವಾ (ಸಿ.ಎಸ್.ಸಿ.) ಕೇಂದ್ರಗಳಲ್ಲಿ ಸಿಗುವ ಸೌಲಭ್ಯ ಪಡೆದುಕೊಂಡು ಸಾರ್ವಜನಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿಠ್ಠಲ್ ಸಾಲ್ಯಾನ್ ಹೇಳಿದರು.

ತಾಲ್ಲೂಕಿನ ಸಿ.ಎಸ್.ಸಿ. ಸೇವಾದಾರರ ಪ್ರೇರಣಾ ಸಭೆಯನ್ನು ದೀಪ ಪ್ರಜ್ವಲಿಸಿ ಮಾತನಾಡಿದರು.

ಸರ್ಕಾರಿ ಸೌಲಭ್ಯಗಳಾದ, ಆಯುಷ್ಮಾನ್ ಕಾರ್ಡ್, ಫಸಲ್ ಭೀಮಾ ಯೋಜನೆ, ರಾಷ್ಟ್ರೀಯ ಪಿಂಚಣಿ ಯೋಜನೆ, ವಿ.ಎನ್.ಪಿ.ಎಸ್., ಇ. ಶ್ರಮಕಾರ್ಡ, ಪಾಸ್ ಪೋರ್ಟ್, ಪ್ಯಾನ್ ಕಾರ್ಡ್, ಮಾನದನ್ ಯೋಜನೆ ಸೇರಿ ಇನ್ನು ಹಲವಾರು ಯೋಜನೆಗಳ ಇದ್ದು ಹಳ್ಳಿಯ ಜನರು ತಮ್ಮ ತಮ್ಮ ಗ್ರಾಮಗಳಲ್ಲಿರುವ ಸಿ.ಎಸ್.ಸಿ.ಮೂಲಕ ಕೇಂದ್ರ ಸರ್ಕಾರ ನಿಗದಿಪಡಿಸಿದ ದರದಲ್ಲಿ ಸೇವೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ADVERTISEMENT

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯು ಮಹತ್ವಕಾಂಕ್ಷಿ ಸಮಾಜಮುಖಿ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲಾ ಸೇವೆಗಳು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಆಗಬೇಕೆಂದು ಮಾಹಿತಿ ನೀಡಿದರು.

ಈ ಒಂದು ಸಭೆಯಲ್ಲಿ ಧಾರವಾಡ ಪ್ರಾದೇಶಿಕ ವ್ಯಾಪ್ತಿ ಸಿಎಸ್‌ಸಿ ಯೋಜನಾಧಿಕಾರಿ ಶಂಕರಗೌಡ, ಕ್ಷೇತ್ರ ಯೋಜನಾಧಿಕಾರಿ ಶ್ರೀಕಾಂತ ನಾಯಕ್, ಎಂ.ಐ.ಎಸ್. ಯೋಜನಾಧಿಕಾರಿ ಅಶ್ವಿನ್, ಟಿ.ಎನ್.ಒ ರಾಘವೇಂದ್ರ, ಐಟಿ ಪ್ರಬಂಧಕರು, ಬಿಸಿ ಪ್ರಬಂಧಕ ಸಚಿನ್, ನಗದು ಮೇಲ್ವಿಚಾರಕರು, ತಾಲ್ಲೂಕಿನ ಕೇಂದ್ರ ಬಿಂದುವಾದ ಸೇವಾದಾರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.