ಹಿರೇಬಾಗೇವಾಡಿ: ಮಾಜಿ ಸಚಿವ ದಿ. ಸುರೇಶ ಅಂಗಡಿ ಅವರ ಸಂಸದರ ಅನುದಾನದಡಿ ಗ್ರಾಮದಲ್ಲಿ ನಿರ್ಮಾಣವಾದ ಸಾಂಸ್ಕೃತಿಕ ಭವನದ ಉದ್ಘಾಟನೆಯನ್ನು ಸಂಸದ ಜಗದೀಶ ಶೆಟ್ಟರ್ ಸೋಮವಾರ ನೆರವೇರಿಸಿದರು.
‘ಈ ಭಾಗದ ರೈಲು ಮಾರ್ಗದಿಂದಾಗಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಬಹಳ ಹತ್ತಿರವಾಗುವುದಲ್ಲದೇ ಈ ಭಾಗದಲ್ಲಿ ವ್ಯಾಪಾರ, ಅರ್ಥಿಕ ಚಟುವಟಿಕೆ ಅಭಿವೃದ್ಧಿಯಾಗಲಿವೆ. ಸರ್ವೆ ಕಾರ್ಯ ಬಹುತೇಕ ಮುಗಿದಿದ್ದು, ಮುಂದಿನ ದಿನಗಳಲ್ಲಿ ಪರಿಹಾರ ನೀಡುವ ಕೆಲಸ ಶೀಘ್ರ ಆರಂಭವಾಗಲಿದೆ’ ಎಂದರು
ಬಡೇಕೊಳ್ಳಮಠದ ನಾಗೇಂದ್ರ ಸ್ವಾಮೀಜಿ, ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯರು, ಅರಳೀಕಟ್ಟಿ ತೋಂಟದಾರ್ಯ ಮಠದ ಶಿವಮೂರ್ತಿ ಸ್ವಾಮೀಜಿ, ಜಾಲಿ ಕರೆಮ್ಮ ಮಂದಿರದ ಉಳವಪ್ಪಜ್ಜ, ಗ್ರಾ.ಪಂ ಅಧ್ಯಕ್ಷೆ ಜಯಶ್ರೀ ಜಪ್ತಿ, ಮಾಜಿ ಸಂಸದೆ ಮಂಗಲಾ ಅಂಗಡಿ, ಮಾಜಿ ಶಾಸಕ ಸಂಜಯ ಪಾಟೀಲ, ಯುವ ಮುಖಂಡ ಚೇತನ ಅಂಗಡಿ, ಮಂಜುನಾಥ ಕುಂಬಾರ, ಸಿದ್ದಪ್ಪ ಹುಕ್ಕೇರಿ, ಬಸವರಾಜ ಡಮ್ಮಣಗಿ, ಕಲಾವತಿ ಧರೆಣ್ಣವರ, ಮಂಜುನಾಥ ಧರೆಣ್ಣವರ, ಆನಂದ ನಂದಿ, ರಾಯಪ್ಪ ಕರಗುಪ್ಪಿ ಮಲ್ಲನಗೌಡ ಹಾದಿಮನಿ, ಮಲ್ಲಿಕಾರ್ಜುನ ಗಟಿಗೆಣ್ಣವರ, ಗಟ್ಟೇಶ ಧರೆಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.