ಹುಕ್ಕೇರಿ: ತಂತ್ರಜ್ಞಾನ ಮುಂದುವರಿದಂತೆ ಸೈಬರ್ ವಂಚನೆ ಕೂಡ ಹೆಚ್ಚುತ್ತಿದೆ. ಸಾರ್ವಜನಿಕರು ಮೊಬೈಲ್ ಹಾಗೂ ಇತರ ವಿದ್ಯುನ್ಮಾನ ಉಪಕರಣ ಬಳಸುವಾಗ ಎಚ್ಚರಿಕೆಯಿಂದಿರಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಕುರಬೇಟ ಹೇಳಿದರು.
ಸ್ಥಳೀಯ ನ್ಯಾಯಾಲಯದ ಇ ಲೈಬ್ರರಿಯಲ್ಲಿ ಪುಣೆಯ ಕ್ವಿಕ್ ಹೀಲ್ ಫೌಂಡೇಶನ್ ಹಾಗೂ ನಿಡಸೋಸಿಯ ಎಸ್.ಜೆ.ಪಿ.ಎನ್ ಬಿಸಿಎ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಸೈಬರ್ ವಂಚನೆ ಮತ್ತು ಸುರಕ್ಷತೆ ಅರಿವು’ ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆನ್‌ಲೈನ್ ಆಟಗಳು, ವೈರಸ್ ಹಾವಳಿ, ಹಣಕಾಸು ವಂಚನೆ, ಉದ್ಯೊಗ ವಂಚನೆ, ಅಪರಿಚಿತ ಕರೆಗಳಿಗೆ ಒಟಿಪಿ ಕೊಡುವ, ಸುಳ್ಳು ಲಿಂಕ್‌ಗಳನ್ನು ಕ್ಲಿಕ್ ಮಾಡಿ ಮೋಸ ಹೋಗುವ ಕುರಿತು ಉದಾಹರಣೆ ಸಹಿತ ವಿವರಿಸಲಾಯಿತು. ಅನಕ್ಷರಸ್ಥರು ಮಾತ್ರವಲ್ಲ ಅಕ್ಷರಸ್ಥರೂ ಸೈಬರ್ ವಂಚನೆಗೆ ಒಳಗಾಗುತ್ತಿರುವುದು ಆತಂಕಕಾರಿಯಾಗಿದೆ. ಸೈಬರ್ ವಂಚಕರಿಂದ ಜಾಗೃತರಾಗಬೇಕು ಎಂದು ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ವಿದ್ಯಾರ್ಥಿಗಳಾದ ತ್ರಿವೇಣಿ ಪಾಟೀಲ, ಭಾಗ್ಯಶ್ರೀ ಕುರುಬರ ಸಲಹೆ ನೀಡಿ ಅರಿವು ಮೂಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಕುರುಬೇಟ, ಮಾಜಿ ಅಧ್ಯಕ್ಷ ಅನೀಸ್ ವಂಟಮೂರಿ, ವಕೀಲರಾದ ಪ್ರೇಮಾ ಕರಜಗಿ, ಕೆ.ಎಲ್. ಜಿನರಾಳ, ಜಾಂಗಟಿಹಾಳ ಪಾಟೀಲ್, ಪ್ರಕಾಶ ಪಾಟೀಲ್, ವಿಠ್ಠಲ್ ಘಸ್ತಿ, ಶೀಲಯ್ಯನವರಮಠ, ಕೊಟಗಿ, ನೋಟರಿ ಎಂ.ಎಂ ಪಾಟೀಲ, ಮಂಜುನಾಥ ಗಸ್ತಿ, ಬಿಸಿಎ ಕಾಲೇಜು ಪ್ರಾಂಶುಪಾಲ ಬಸವರಾಜ ಹಾಲಭಾವಿ, ಪ್ರಾಧ್ಯಾಪಕರಾದ ಪವನ್ ಹಿರೇಮಠ, ಆನಂದ ಸೋನಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.