ADVERTISEMENT

ಯಲ್ಲಮ್ಮ ಗುಡ್ಡದ ಲಾಡ್ಜ್‌ನಲ್ಲಿ ಸಿಲಿಂಡರ್‌ ಸ್ಫೋಟ: ಬೆಂಗಳೂರಿಗರು ಸೇರಿ 15ಜನ ಗಾಯ

ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನಕ್ಕೆ ಕೂಗಳತೆ ದೂರದಲ್ಲಿರುವ ಲಾಡ್ಜ್‌ನಲ್ಲಿ, ಮಂಗಳವಾರ ಕುಕ್ಕರ್‌ ಹಾಗೂ ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 14:04 IST
Last Updated 13 ಆಗಸ್ಟ್ 2024, 14:04 IST
<div class="paragraphs"><p>ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನಕ್ಕೆ ಕೂಗಳತೆ ದೂರದಲ್ಲಿರುವ ಲಾಡ್ಜ್‌ನಲ್ಲಿ, ಮಂಗಳವಾರ ಕುಕ್ಕರ್‌ ಹಾಗೂ ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟ</p></div>

ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನಕ್ಕೆ ಕೂಗಳತೆ ದೂರದಲ್ಲಿರುವ ಲಾಡ್ಜ್‌ನಲ್ಲಿ, ಮಂಗಳವಾರ ಕುಕ್ಕರ್‌ ಹಾಗೂ ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟ

   

ಸವದತ್ತಿ (ಬೆಳಗಾವಿ ಜಿಲ್ಲೆ): ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನಕ್ಕೆ ಕೂಗಳತೆ ದೂರದಲ್ಲಿರುವ ಲಾಡ್ಜ್‌ನಲ್ಲಿ, ಮಂಗಳವಾರ ಕುಕ್ಕರ್‌ ಹಾಗೂ ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟಗೊಂಡು 8 ಭಕ್ತರು ಹಾಗೂ ಲಾಡ್ಜ್‌ ಕೆಲಸಗಾರರು ಸೇರಿ 15 ಮಂದಿ ಗಾಯಗೊಂಡಿದ್ದಾರೆ.

ದೇವಿ ದರ್ಶನಕ್ಕೆ ಬಂದಿದ್ದ ಬೆಂಗಳೂರಿನ ರಾಮಸ್ವಾಮಿ ಚಿಕ್ಕಪುಳ್ಳಪ್ಪ (42), ವೆಂಕಟೇಶ ಕೃಷ್ಣಪ್ಪ (53), ರತ್ನಮ್ಮ ಗೋವಿಂದಪ್ಪ (48), ಗಣೇಶ ರಮೇಶಪ್ಪ ಕರೂರ (30), ಗದಗ ಜಿಲ್ಲೆಯ ಪ್ರಸಾದ ಜಾಧವ (34) ಮತ್ತು ಯಾದಗಿರಿ ಜಿಲ್ಲೆಯ ಬಸಮ್ಮ ಬಿರಾದಾರ (56), ಸುಮಿತ್ರಾ ಯಕ್ಕಹಳ್ಳಿ (42) ಹಾಗೂ ಸಿದ್ದಮ್ಮ ಶೆಟಗೇರಿ ಅವರು ಗಾಯಗೊಂಡಿದ್ದು, ಎಲ್ಲರನ್ನೂ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಡ್ಜನ 7 ಕೆಲಸಗಾರರು ಸವದತ್ತಿ ವಿವಿಧ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಯಾರಿಗೂ ಪ್ರಾಣಾಪಾಯ ಇಲ್ಲವೆಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಬೆಂಗಳೂರು ಮತ್ತು ಯಾದಗಿರಿ ಮೂಲದ ಭಕ್ತರು ಲಾಡ್ಜನಲ್ಲಿ ಕೋಣೆ ಪಡೆದು ಅಡುಗೆ ಮಾಡುತ್ತಿದ್ದರು. ಮೊದಲು ಕುಕ್ಕರ್‌ ಸಿಡಿದು ಸಿಲಿಂಡರ್ ಹಾಗೂ ಒಲೆ ಮೇಲೆ ಬಿದ್ದಿತು. ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿತು. ಕೋಣೆಯಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳು, ಬಟ್ಟೆ, ಆಹಾರ ಸಾಮಗ್ರಿಗಳಿಂದಾಗಿ ಬೆಂಕಿ ಜ್ವಾಲೆ ಹೆಚ್ಚಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.