ADVERTISEMENT

ಗೋಕಾಕ | 9ನೇ ವರ್ಷದ ದಾಂಡಿಯಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:44 IST
Last Updated 29 ಸೆಪ್ಟೆಂಬರ್ 2025, 4:44 IST
ಗೋಕಾಕದ ಶುಭಂ ಗಾರ್ಡನ್‌ನಲ್ಲಿ ಆಯೋಜಿಸಿದ್ದ 9ನೇ ವರ್ಷದ ದಾಂಡಿಯಾ ಮಹೋತ್ಸವ ಕಾರ್ಯಕ್ರಮವನ್ನು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧಿಶ ಉಮೇಶ ಆತ್ನುರೆ ಉದ್ಘಾಟಿಸಿದರು
ಗೋಕಾಕದ ಶುಭಂ ಗಾರ್ಡನ್‌ನಲ್ಲಿ ಆಯೋಜಿಸಿದ್ದ 9ನೇ ವರ್ಷದ ದಾಂಡಿಯಾ ಮಹೋತ್ಸವ ಕಾರ್ಯಕ್ರಮವನ್ನು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧಿಶ ಉಮೇಶ ಆತ್ನುರೆ ಉದ್ಘಾಟಿಸಿದರು   

ಗೋಕಾಕ: ನಗರದ ಜೆಸಿಐ ಸಂಸ್ಥೆ ಹಾಗೂ ಬನಶಂಕರಿ ಮಹಿಳಾ ಮಂಡಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಭಂ ಗಾರ್ಡನ್‌ದಲ್ಲಿ ಹಮ್ಮಿಕೊಂಡಿದ್ದ 9ನೇ ವರ್ಷದ ದಾಂಡಿಯಾ ಮಹೋತ್ಸವ ಕಾರ್ಯಕ್ರಮಕ್ಕೆ ಇಲ್ಲಿನ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಉಮೇಶ ಆತ್ನುರೆ ಶನಿವಾರ ಚಾಲನೆ ನೀಡಿದರು.

ನವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ಗುಂಪು ನೃತ್ಯ ಸ್ಪರ್ಧೆಯಲ್ಲಿ ಲಕ್ಕಿ ನೃತ್ಯ ತಂಡ (ಪ್ರಥಮ), ವೇದಾ ನೃತ್ಯ ತಂಡ (ದ್ವಿತೀಯ) ಹಾಗೂ ಶ್ಯಾನಿಡೋ ನೃತ್ಯ ತಂಡ (ತೃತೀಯ) ಬಹುಮಾನ ಪಡೆದುಕೊಂಡವು.

ಕಾರ್ಯಕ್ರಮದಲ್ಲಿ 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹಾದೇವ ಕಾನಟ್ಟಿ, ಪ್ರಧಾನ ಜೆ.ಎಂ.ಎಫ್‌.ಸಿ. ನ್ಯಾಯಾಧೀಶೆ ಚೈತ್ರಾ ಕುಲಕರ್ಣಿ ಹಾಗೂ 1ನೇ ಹೆಚ್ಚುವರಿ ಜೆ.ಎಂ.ಎಫ್‌.ಸಿ. ನ್ಯಾಯಾಧೀಶ ಅಭಿನಯ, ವಕೀಲರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಬಿ.ಪಾಟೀಲ, ಖಜಾಂಚಿ ಅಪ್ಪಣ್ಣ ಖಂಡ್ರಟ್ಟಿ, ಮಹಿಳಾ ಪ್ರತಿನಿಧಿ ವಿಜಯಲಕ್ಷ್ಮೀ ಸಿದ್ಧಾಪೂರಮಠ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಜೆಸಿಐ ಸಂಸ್ಥೆಯ ವಿಷ್ಣು ಲಾತೂರ, ಶಿವಲಿಂಗ ಕೆ., ರಾಜೇಶ್ವರಿ ಕಿತ್ತೂರ, ಜ್ಯೋತಿ ನಜಾರೆ, ಸೀಮಾ ಕಲ್ಯಾಣಶೆಟ್ಟಿ, ಕಿಶೋರ ಭಟ್ಟ್‌, ರವೀಂದ್ರ ಕಿತ್ತೂರ, ಬಸವರಾಜ ಗಂಗರಡ್ಡಿ, ಪ್ರಕಾಶ ಕಿತ್ತೂರ, ರೇಖಾ ಕ್ಯಾಸ್ತಿ, ಇಮ್ತಿಯಾಜ ದಫೇದಾರ, ಕಾಟೇಶ ಗೋಕಾವಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.