ಮೂಡಲಗಿ: ‘ಕವಿಗಳು ಸಮಾಜಕ್ಕೆ ಧ್ವನಿಯಾಗಿ ತಮ್ಮ ಕಾವ್ಯ ರಚಿಸಬೇಕು’ ಎಂದು ಸಾಹಿತಿ ಮಹಾದೇವ ಜಿಡ್ಡಿಮನಿ ಹೇಳಿದರು.
ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಬಸವ ಆಶ್ರಮದಲ್ಲಿ ನವರಾತ್ರಿ ದಸರಾ ಉತ್ಸವ ಅಂಗವಾಗಿ ಮೂಡಲಗಿ ತಾಲ್ಲೂಕು ಚುಟುಕ ಸಾಹಿತ್ಯ ಪರಿಷತ್ತಿ ಸಹಯೋಗದಲ್ಲಿ ಏರ್ಪಡಿಸಿದ್ದ ದಸರಾ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಯುವ ಕವಿಗಳು ಅಧ್ಯಯನಶೀಲರಾಗಿ ಕಾವ್ಯ ಕ್ಷೇತ್ರದಲ್ಲಿ ಬೆಳೆಯಬೇಕು ಎಂದರು.
ಮುಖ್ಯ ಅತಿಥಿ ಶೈಲಜಾ ಬಡಿಗೇರ ಕವಿಗೋಷ್ಠಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸ್ತ್ರೀಸಂವೇದನೆಯ ಕಾವ್ಯಗಳು ಓದುಗರ ಹೃದಯ ತಲುಪುತ್ತವೆ. ಅಂಥ ಕಾವ್ಯಗಳು ಹೆಚ್ಚು ಹೆಚ್ಚು ಬರಬೇಕು ಎಂದರು.
ಅತಿಥಿ ಪ್ರಾಧ್ಯಾಪಕ ನಿಂಗಪ್ಪ ಸಂಗ್ರೇಜಕೊಪ್ಪ ಮಾತನಾಡಿ ಕವಿಯ ಭಾವನೆಗಳೇ ಕಾವ್ಯಕ್ಕೆ ಮುಖ್ಯ ಬಂಡವಾಳವಾಗಿದ್ದು, ಕವಿಯ ಅಂತರ್ಮುಖವು ಕಾವ್ಯದ ಮೂಲಕ ಪ್ರಕಟವಾಗುತ್ತದೆ ಎಂದರು.
ಅತಿಥಿಗಳಾಗಿ ರಂಗನಗೌಡ ಪಾಟೀಲ, ಶಿವನಗೌಡ ಪಾಟೀಲ, ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ, ಸಿದ್ರಾಮ್ ದ್ಯಾಗಾನಟ್ಟಿ, ರಾಮಲಿಂಗಪ್ಪ ಹೂಗಾರ, ಬಿ.ಎಂ. ಸ್ವರಮಂಡಳ, ಡಾ. ಎಸ್.ಎಸ್. ಪಾಟೀಲ, ಕೆಂಪಣ್ಣ ಜುಂಜರವಾಡ ಇದ್ದರು.
ಸಂಘಟಕ ಚಿದಾನಂದ ಹೂಗಾರ ಸ್ವಾಗತಿಸಿದರು, ಮಹಾದೇವ ಪೋತರಾಜ ನಿರೂಪಿಸಿದರು, ವಿವೇಕಾನಂದ ಹೂಗಾರ ವಂದಿಸಿದರು.
ಕವಿತೆ ವಾಚನ: ಕವಿಗಳಾದ ಬಸಪ್ಪ ಇಟ್ಟನ್ನವರ, ಶಿವಲಿಂಯಯ್ಯ ಗುರುಸ್ವಾಮಿ, ಶಿವಕುಮಾರ ಕೋಡಿಹಾಳ, ದುಂಡಪ್ಪ ಕಮತಿ, ಕಲ್ಲಪ್ಪ ಡೋಣಿ, ಮುತ್ತುರಾಜ ಬೋವಿ, ಸಾಗರ ಝಂಡೇಕುರಬರ, ಅನಿಲ ಮಾಡಿವಾಳರ, ಶ್ರೀಶೈಲ್ ಶಿರೂರ, ಮಾರುತಿ ಗೌಡರ, ವಿಠಲ ಗೆಣ್ಣೂರ, ವೆಂಕಟೇಶ ಹೆಳವರ, ಮಹಾಂತೇಶ ಗೋನಕೊಪ್ಪ, ವಿಜಯಲಕ್ಷ್ಮೀ ತಿರಕನ್ನವರ, ಶಶಿಕಲಾ ಕುಲಕರ್ಣಿ, ಗೋದಾವರಿ ದೇಶಪಾಂಡೆ, ಸರಸ್ವತಿ, ಶೆಕ್ಕಿ, ಭಾಗಿರತಿ ಕುಳಲಿ, ರೂಪಾ ಕೌಜಲಗಿ, ಅಶ್ವಿನಿ ಚಿಪ್ಪಲಕಟ್ಟಿ ಒಟ್ಟು 25 ಮಂದಿ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.