ADVERTISEMENT

ಅಕ್ಷರ ದಾಸೋಹ ಕೇಂದ್ರಕ್ಕೆ ಡಿಡಿಪಿಐ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಮೇ 2025, 14:19 IST
Last Updated 30 ಮೇ 2025, 14:19 IST
ಹುಕ್ಕೇರಿ ಗುರುಶಾಂತೇಶ್ವರ ಜನಕಲ್ಯಾಣ ನಡೆಸುತ್ತಿರುವ ಅಕ್ಷರ ದಾಸೋಹ ಕೇಂದ್ರಕ್ಕೆ ಚಿಕ್ಕೋಡಿ ಡಿಡಿಪಿಐ ಆರ್.ಸೀತಾರಾಮು ಶುಕ್ರವಾರ ಭೇಟಿ ನೀಡಿ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ್ ಸ್ವಾಮೀಜಿ ಜತೆ ಚರ್ಚಿಸಿದರು
ಹುಕ್ಕೇರಿ ಗುರುಶಾಂತೇಶ್ವರ ಜನಕಲ್ಯಾಣ ನಡೆಸುತ್ತಿರುವ ಅಕ್ಷರ ದಾಸೋಹ ಕೇಂದ್ರಕ್ಕೆ ಚಿಕ್ಕೋಡಿ ಡಿಡಿಪಿಐ ಆರ್.ಸೀತಾರಾಮು ಶುಕ್ರವಾರ ಭೇಟಿ ನೀಡಿ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ್ ಸ್ವಾಮೀಜಿ ಜತೆ ಚರ್ಚಿಸಿದರು   

ಹುಕ್ಕೇರಿ: ಸ್ಥಳೀಯ ಗುರುಶಾಂತೇಶ್ವರ ಜನಕಲ್ಯಾಣ ಸಂಸ್ಥೆಯ ‘ಅಕ್ಷರ ದಾಸೋಹ ಕೇಂದ್ರಕ್ಕೆ’ ಚಿಕ್ಕೋಡಿ ಡಿಡಿಪಿಐ ಆರ್.ಸೀತಾರಾಮು ಶುಕ್ರವಾರ ಭೇಟಿ ನೀಡಿ ಅಡುಗೆ ತಯಾರಿ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರದ ಒಳಗಡೆ ಸುತ್ತಾಡಿ ಅಡುಗೆ ತಯಾರಿ ಮಾಡಲು ಬಳಸುತ್ತಿರುವ ಅಡುಗೆ ಸಾಮಾನು, ಬಳಸಿದ ತರಕಾರಿ, ಅಕ್ಕಿ ಮತ್ತಿತರ ವಸ್ತುಗಳನ್ನು ಹಾಗು ಸ್ವಚ್ಛತೆಯನ್ನು ಗಮನಿಸಿ, ಆಧುನಿಕ ಪದ್ಧತಿ ಅಳವಡಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಸರ್ಕಾರ ಮಾಡುವ ಕೆಲಸವನ್ನು ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಸ್ವಾಮೀಜಿ ಅವರು ಯಾವುದೆ ಕಪ್ಪುಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿಕೊಂಡು ಹೋಗುತ್ತಿರುವುದು ಇತರೆ ಎನ್‌ಜಿಒಗಳಿಗೆ ಮಾದರಿ ಎಂದರು.

ADVERTISEMENT

ಕೇಂದ್ರದ ಮುಖ್ಯಸ್ಥ ಚಂದ್ರಶೇಖರ್ ಸ್ವಾಮೀಜಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯನ್ನು ಕಟ್ಟುನಿಟ್ಟಾಗಿ ಕಾರ್ಯಗತ ಮಾಡಲಾಗುತ್ತಿದೆ. ಹುಕ್ಕೇರಿ, ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲ್ಲೂಕಿನ ಸುಮಾರು 65 ಸಾವಿರ ವಿದ್ಯಾರ್ಥಿಗಳಿಗೆ ಬಿಸಿಯೂಟ ಪೂರೈಸಲಾಗುತ್ತಿದೆ ಎಂದರು. ಈ ಮೊದಲು ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್.ಮಲ್ಲಾಡದ ಮತ್ತು ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಬಿಇಒ ಪ್ರಭಾವತಿ ಪಾಟೀಲ್ ಕೇಂದ್ರಕ್ಕೆ ಭೇಟಿ ನೀಡಿ ಸ್ವಚ್ಛತೆ, ರುಚಿಯೂಟ ತಯಾರಿಸುವಲ್ಲಿ ಸಲಹೆ, ಸೂಚನೆ ನೀಡಿದ್ದಾರೆ ಎಂದರು.

ಬಿಇಒ ಪ್ರಭಾವತಿ ಪಾಟೀಲ್ ಮಾತನಾಡಿ, ಶುಕ್ರವಾರ ಶಾಲೆ ಪ್ರಾರಂಭವಾಗುವುದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಬಿಸಿಯೂಟ ದೊರೆಯುವಲ್ಲಿ ಕ್ರಮ ಜರುಗಿಸಲಾಗುತ್ತಿದೆ ಎಂದರು.

ಬಿಸಿಯೂಟ ಸಾಗಿಸುವ ವಾಹನಗಳಿಗೆ ಚಾಲನೆ ನೀಡಲಾಯಿತು.
ಅಕ್ಷರ ದಾಸೋಹ ಜಿಲ್ಲಾ ಸಹಾಯಕ ನಿರ್ದೇಶಕ ಮಹಾದೇವ ಜನಗೌಡ, ಚಿಕ್ಕೋಡಿ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷರಾದ ಹರಿದಾಸ ಖಾಡೆ, ಸಂಗಮೇಶ್ ಹೂಗಾರ್, ಬಿ.ಆರ್.ಸಿ.ಸಮನ್ವಯಾಧಿಕಾರಿ ಎ.ಎಸ್.ಪದ್ಮನ್ನವರ, ಸಂಪತ್ ಕುಮಾರ ಶಾಸ್ತ್ರಿ, ಸಿದ್ದಲಿಂಗಯ್ಯ ಹಿರೇಮಠ, ರಾಜು ಜೋಡಟ್ಟಿ ಇದ್ದರು.

ಹುಕ್ಕೇರಿ ಗುರುಶಾಂತೇಶ್ವರ ಜನಕಲ್ಯಾಣ ನಡೆಸುತ್ತಿರುವ ಅಕ್ಷರ ದಾಸೋಹ ಕೇಂದ್ರಕ್ಕೆ ಚಿಕ್ಕೋಡಿ ಡಿಡಿಪಿಐ ಆರ್.ಸೀತಾರಾಮು ಶುಕ್ರವಾರ ಭೇಟಿ ನೀಡಿದಾಗ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ್ ಸ್ವಾಮೀಜಿ ಸತ್ಕರಿಸಿದರು.
ಹುಕ್ಕೇರಿ ಗುರುಶಾಂತೇಶ್ವರ ಜನಕಲ್ಯಾಣ ನಡೆಸುತ್ತಿರುವ ಅಕ್ಷರ ದಾಸೋಹ ಕೇಂದ್ರಕ್ಕೆ ಬಿಇಒ ಪ್ರಭಾವತಿ ಪಾಟೀಲ್ ಬಿ.ಆರ್.ಸಿ. ಎ.ಎಸ್.ಪದ್ಮನ್ನವರ ಶುಕ್ರವಾರ ಭೇಟಿ ನೀಡಿದಾಗ ಬಿಸಿಯೂಟಕ್ಕೆ ಬಳಸುವ ಅಕ್ಕಿ ಪರಿಶೀಲನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.