ADVERTISEMENT

ಖಾಸಗಿ ಐಟಿಐಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 12:00 IST
Last Updated 19 ಡಿಸೆಂಬರ್ 2018, 12:00 IST

ಬೆಳಗಾವಿ: ಕನಿಷ್ಠ 7 ವರ್ಷದಿಂದ ತರಬೇತಿ‌ ನೀಡುತ್ತಿರುವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘದ ಸದಸ್ಯರು ಬುಧವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

‘ರಾಜ್ಯದಲ್ಲಿ ಖಾಸಗಿ ಐಟಿಐ ಕಾಲೇಜುಗಳು ಹತ್ತಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಹಾಗೂ ಕೈಗಾರಿಕೆಗಳಿಗೆ ಬೇಕಾದ ಕೌಶಲವನ್ನು ಕಲಿಸುತ್ತಿವೆ. 70ಸಾವಿರಕ್ಕೂ ಹೆಚ್ಚು ವಿದ್ಯಾಥಿಗಳಿಗೆ ಶಿಕ್ಷಣ ನೀಡಿವೆ. ಇದರ ಮಹತ್ವ ಅರಿತುಕೊಂಡು ಈ ಹಿಂದೆ ಸರ್ಕಾರಗಳು ಅನುದಾನ ನೀಡುತ್ತಿದ್ದವು. ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿ ತರಬೇತಿ ಪರಿಷತ್ತು ಕನಿಷ್ಠ 7 ವರ್ಷ ಪೂರೈಸಿದ ಖಾಸಗಿ ಐಟಿಐ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸವಂತೆ 1997 ನಿಯಮ ರೂಪಿಸಲಾಗಿದೆ. ಅದರಂತೆ ಕಳೆದ ಹಲವು ಸರಕಾರಗಳು 104 ಐಟಿಐ ಕಾಲೇಜುಗಳಿಗೆ ಅನುದಾನ ನೀಡಲಾಗಿದೆ. ಆದರೆ, ಈಚೆಗೆ ಸರ್ಕಾರವು ಅನುದಾನಕ್ಕೆ ಒಳಪಡಿಸುತ್ತಿಲ್ಲ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವುದು ಕಷ್ಟಸಾಧ್ಯವಾಗಿದೆ’ ಎಂದು ತಿಳಿಸಿದರು.

‘ಖಾಸಗಿ ಐಟಿಐ ಕಾಲೇಜುಗಳ ಉತ್ತೇಜನಕ್ಕಾಗಿ ಅನುದಾನ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಂಘದ ಮುಖಂಡರಾದ ಎಸ್.ಎಂ. ನೆರಬೆಂಚಿ, ನವೀನಕುಮಾರ ಕೆ.ಎಸ್., ಎಸ್.ಎಸ್. ಹೊಳಲ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.