ADVERTISEMENT

ಹಳೆಯ ಮಾರುಕಟ್ಟೆಯಲ್ಲೇ ಮಳಿಗೆ ನೀಡುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 12:37 IST
Last Updated 2 ಜುಲೈ 2019, 12:37 IST
ಬೆಳಗಾವಿಯ ಹಳೆಯ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಮಳಿಗೆಗಳನ್ನು ಆರಂಭಿಸಿ ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ಬೆಳಗಾವಿಯ ಹಳೆಯ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಮಳಿಗೆಗಳನ್ನು ಆರಂಭಿಸಿ ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು   

ಬೆಳಗಾವಿ: ನಗರದ ಹಳೆಯ ಸಗಟು ತರಕಾರಿ ಮಾರುಕಟ್ಟೆಯಲ್ಲೇ ಮಳಿಗೆಗಳನ್ನು ಆರಂಭಿಸಿ ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರುಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.

‘ಎಪಿಎಂಸಿ ಆವರಣದಲ್ಲಿ ನಿರ್ಮಿಸಲಾಗಿರುವ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕೆಲವೇ ಜನರಿಗೆ ಮಾತ್ರ ಮಳಿಗಳು ಲಭ್ಯವಾಗಿವೆ. ಆದರೆ, ಇನ್ನುಳಿದ ವ್ಯಾಪಾರಿಗಳಿಗೆ 6 ತಿಂಗಳ ಬಳಿಕ ಹೊಸ ಅಂಗಡಿ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಯಾರಿಗೆ ಅಂಗಡಿಗಳು ಸಿಕ್ಕಿಲ್ಲವೋ ಅವರಿಗೆ ಹಳೆಯ ಮಾರುಕಟ್ಟೆಯಲ್ಲಿ ಮಳಿಗೆ ಆರಂಭಿಸಲು ಅನುಮತಿ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಎಪಿಎಂಸಿಯಲ್ಲಿ ವ್ಯಾಪಾರ ನಡೆಸುವವರ ಅಂಗಡಿಗಳು ರವಿವಾರ ಪೇಟೆಯಲ್ಲಿಯೂ ಇವೆ. ಹೀಗಾಗಿ, ನಮಗೂ ಬೇರೆ ಕಡೆ ಅವಕಾಶ ಮಾಡಿಕೊಡಬೇಕು. ಹಳೆಯ ಮಾರುಕಟ್ಟೆ ನಗರದ ಮಧ್ಯ ಭಾಗದಲ್ಲಿದ್ದು, ತರಕಾರಿ ಮಾರಾಟ ಹಾಗೂ ಖರೀದಿಗೆ ಅತ್ಯಂತ ಸೂಕ್ತ ಸ್ಥಳವಾಗಿದೆ.ಹೊಸ ಮಾರುಕಟ್ಟೆ ನಗರದಿಂದ 7–8 ಕಿ.ಮೀ. ದೂರದಲ್ಲಿದೆ. ಇದರಿಂದ ಅಲ್ಲಿ ಹೋಗಿ–ಬರುಲು ಸಮಸ್ಯೆಯಾಗುತ್ತಿದೆ. ವಾಹನಗಳಲ್ಲಿ ತರಕಾರಿ ತೆಗೆದುಕೊಂಡು ಹೋಗಲು ಹೆಚ್ಚು ಬಾಡಿಗೆ ನೀಡಬೇಕಾಗಿರುವುದರಿಂದ ರೈತರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ವ್ಯಾಪಾರಿಗಳಾದ ಆರ್.ಕೆ. ಪಾವಸೆ,ಜಮೀರುದ್ದಿನ್ ಹಂಚಿನಮನಿ, ಕುಮಾರ ಜೋಶಿ,ಸಂಜಯ ಪಾಟೀಲ,ಇಸ್ಮಾಯಿಲ್ ಬಾಗವಾನ್, ಆಸಿಫ್ ಹಂಚಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.