
ಬೈಲಹೊಂಗಲ: ಬ್ರಿಟಿಷ ಕಾಲದಿಂದಲೂ ಹಳೆಯದಾದ ಉಪವಿಭಾಗ ಕೇಂದ್ರವಾದ ಬೈಲಹೊಂಗಲವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ್ ಬೋಳಣ್ಣವರ, ಮಾಜಿ ಶಾಸಕ ವಿಶ್ವನಾಥ ಪಾಟೀಲ, ಮುಖಂಡ ಮಹಾಂತೇಶ ತುರಮರಿ, ಯುವ ಧುರೀಣ ಗುರು ಮೆಟಗುಡ್ಡ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಅವರ ನೇತೃತ್ವದಲ್ಲಿ ನಗರದ ಮೂರುಸಾವಿರ ಮಠದಲ್ಲಿ ಶನಿವಾರ ಸಭೆ ನಡೆಯಿತು.
ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ನಾಡಿನ ಜನರ ಬಯಕೆಯಂತೆ ಬೈಲಹೊಂಗಲವನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಸಿಎಂ ಅವರು ಬಹಳಷ್ಟು ವಿಚಾರ ಮಾಡಿ ಸೂಕ್ತ ನಿರ್ಧಾರ ಕೈಕೊಳ್ಳಬೇಕು ಎಂದರು.
ಮುಖಂಡ ಎಫ್.ಎಸ್.ಸಿದ್ಧನಗೌಡರ ಮಾತನಾಡಿ, 'ಬೈಲಹೊಂಗಲ ಜಿಲ್ಲೆಯಾದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ ಎಂದು ಗುಡುಗಿದರು.
ಸಿಎಂ ಸಿದ್ಧರಾಮಯ್ಯ ತಪ್ಪು ನಿರ್ಧಾರ ತೆಗೆದುಕೊಂಡರೆ ಬೈಲಹೊಂಗಲ ನಾಡಿನ ಜನರು ಸಹಿಸಲ್ಲ. ಯಾವುದೇ ತಾಲ್ಲೂಕನ್ನು ಜಿಲ್ಲೆ ಮಾಡಿದರೆ ನಮ್ಮದು ತಕರಾರು ಇಲ್ಲ. ಆದರೆ ಬೈಲಹೊಂಗಲ ಜಿಲ್ಲೆಯನ್ನಾಗಿ ಘೋಷಣೆ ಮಾಡಲೇಬೇಕು. ಹೋರಾಟ ನಡೆದ ವೇಳೆ ಏನಾದರೂ ಅನಾಹುತ ನಡೆದರೆ, ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದರು.
ಮುಖಂಡರಾದ ಮಡಿವಾಳಪ್ಪ ಹೋಟಿ, ಮಹಾಂತೇಶ ಮತ್ತಿಕೊಪ್ಪ, ಬಿ.ಬಿ.ಗಣಾಚಾರಿ, ವಿರೂಪಾಕ್ಷ ಕೋರಿಮಠ, ಬಸವರಾಜ ಭರಮಣ್ಣವರ, ಬಾಬುಸಾಬ ಸುತಗಟ್ಟಿ, ಸುಭಾಸ ಬಾಗೇವಾಡಿ, ಮಹಾಂತೇಶ ಕಮತ, ಶ್ರೀಕಾಂತ ಮಾಳಕ್ಕನವರ, ರಾಜು ಬೋಳಣ್ಣವರ, ಸುರೇಶ ಯರಗಟ್ಟಿ, ಡಾ.ಮಹಾಂತೇಶ ಕಳ್ಳಿಬಡ್ಡಿ, ಮೆಹಬೂಬಸುಭಾನಿ ನದಾಫ್, ಸಂತೋಷ ಹಡಪದ, ಉಳವಪ್ಪ ಉಪ್ಪಿನ, ಚಂದನ ಕೌಜಲಗಿ, ಮಡಿವಾಳಪ್ಪ ಚಿಕ್ಕೊಪ್ಪ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.