ADVERTISEMENT

ಹುಕ್ಕೇರಿ: ರಮೇಶ್ ಕತ್ತಿಗೆ ಬಿಜೆಪಿ ಟಿಕೆಟ್ ಕೊಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 16:07 IST
Last Updated 2 ಮಾರ್ಚ್ 2024, 16:07 IST
ಹುಕ್ಕೇರಿ ತಾಲ್ಲೂಕಿನ ಎಲಿಮುನ್ನೋಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಕತ್ತಿ ಅಭಿಮಾನಿಗಳು ಸೇರಿ ರಮೇಶ್ ಕತ್ತಿಗೆ ಬಿಜೆಪಿ ಟಿಕೆಟ್ ಕೊಡುವಂತೆ ಶುಕ್ರವಾರ ಆಗ್ರಹಿಸಿದರು
ಹುಕ್ಕೇರಿ ತಾಲ್ಲೂಕಿನ ಎಲಿಮುನ್ನೋಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಕತ್ತಿ ಅಭಿಮಾನಿಗಳು ಸೇರಿ ರಮೇಶ್ ಕತ್ತಿಗೆ ಬಿಜೆಪಿ ಟಿಕೆಟ್ ಕೊಡುವಂತೆ ಶುಕ್ರವಾರ ಆಗ್ರಹಿಸಿದರು   

ಹುಕ್ಕೇರಿ: ‘ಜಿಲ್ಲೆಯಲ್ಲಿ ಬಿಜೆಪಿ ಸುಭದ್ರವಾಗಿಸುವಲ್ಲಿ ದಿ. ಉಮೇಶ್ ಕತ್ತಿ ಮತ್ತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಅವರದ್ದು ಪ್ರಮುಖ ಪಾತ್ರವಿದೆ. ರಮೇಶ್ ಕತ್ತಿ ಅವರಿಗೆ ಚಿಕ್ಕೋಡಿ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಕೊಡಬೇಕು’ ಎಂದು ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ  ಬಿ.ಕೆ.ಮಗೆನ್ನವರ ಒತ್ತಾಯಿಸಿದರು.

ತಾಲ್ಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಕತ್ತಿ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಪಕ್ಷದ ವರಿಷ್ಠರು ನಮ್ಮ ಬೇಡಿಕೆಗೆ ಸ್ಪಂದಿಸಬೇಕು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮೀರಾಸಾಬ ಮುಲ್ತಾನಿ ಮಾತನಾಡಿ, ‘ರಮೇಶ್ ಕತ್ತಿಗೆ ಟಿಕೆಟ್ ನೀಡಿದಲ್ಲಿ ಈ ಭಾಗದ ಮುಸ್ಲಿಮರು ಅವರ ಪರ ಮತ ಚಲಾಯಿಸುವರು’ ಎಂದರು.

ADVERTISEMENT

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಬಸಗೌಡ ಮಗೆನ್ನವರ, ಪಿಕೆಪಿಎಸ್ ಅಧ್ಯಕ್ಷ ಶಶಿಕಾಂತ ದೊಡಲಿಂಗನವರ, ಮುಖಂಡರಾದ ಕೆಂಪಣ್ಣ ವಾಸೇದಾರ್, ಅರುಣ ಹುದ್ದಾರ, ಜಿನಗೌಡ ಇಮಗೌಡನವರ, ಕಲಗೌಡ ಮಲಗೌಡನವರ, ಮಹಾಂತೇಶ ಮಗೆನ್ನವರ, ಅಪ್ಪಣ್ಣ ಬಡಿಗೇರ್, ಬಿ.ಎ.ಇಮಗೌಡನವರ, ದಸ್ತಗೀರ ತಾಸೀಲ್ದಾರ್, ಮಹಾಂತೇಶ ನಾಗನೂರಿ, ನಿಂಗಪ್ಪ ಹಸರಾಣಿ ಇದ್ದರು.

ಹುಕ್ಕೇರಿ ತಾಲ್ಲೂಕಿನ ಎಲಿಮುನ್ನೋಳಿಯಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಮತ್ತು ಕತ್ತಿ ಅಭಿಮಾನಿಗಳು ಸೇರಿದ್ದ ಸಭೆಯಲ್ಲಿ ರಮೇಶ್ ಕತ್ತಿಗೆ ಬಿಜೆಪಿ ಟಿಕೆಟ್ ಕೊಡುವಂತೆ ಆಗ್ರಹಿಸಿ ವಕೀಲ ಬಿ.ಕೆ.ಮಗೆನ್ನವರ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.