ADVERTISEMENT

ಮದುವೆಗಳಲ್ಲಿ ಬ್ಯಾಂಡ್‌ಗೆ ಅನುಮತಿ: ಅಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 11:58 IST
Last Updated 7 ಸೆಪ್ಟೆಂಬರ್ 2020, 11:58 IST
ಮದುವೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಮಂಗಳವಾದ್ಯ ಮತ್ತು ಬ್ರಾಸ್‌ ಬ್ಯಾಂಡ್‌ಗಳನ್ನು ನುಡಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಜಿಲ್ಲಾ ಮಂಗಳವಾದ್ಯ ಹಾಗೂ ಬ್ಯಾಂಡ್ ಕಲಾವಿದರ ಸಂಘದವರು ಸೋಮವಾರ ‍ಪ್ರತಿಭಟನೆ ನಡೆಸಿದರು
ಮದುವೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಮಂಗಳವಾದ್ಯ ಮತ್ತು ಬ್ರಾಸ್‌ ಬ್ಯಾಂಡ್‌ಗಳನ್ನು ನುಡಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಜಿಲ್ಲಾ ಮಂಗಳವಾದ್ಯ ಹಾಗೂ ಬ್ಯಾಂಡ್ ಕಲಾವಿದರ ಸಂಘದವರು ಸೋಮವಾರ ‍ಪ್ರತಿಭಟನೆ ನಡೆಸಿದರು   

ಬೆಳಗಾವಿ: ಮದುವೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಮಂಗಳವಾದ್ಯ ಮತ್ತು ಬ್ರಾಸ್‌ ಬ್ಯಾಂಡ್‌ಗಳನ್ನು ನುಡಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಮಂಗಳವಾದ್ಯ ಹಾಗೂ ಬ್ಯಾಂಡ್ ಕಲಾವಿದರ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ‍ಪ್ರತಿಭಟನೆ ನಡೆಸಿದರು.

‘ಈ ವೃತ್ತಿಯನ್ನು ಸಾವಿರಾರು ಮಂದಿ ಅವಲಂಬಿಸಿದ್ದೇವೆ. ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಸಭೆ, ಸಮಾರಂಭ, ಮದುವೆ, ಜಯಂತಿ, ಜಾತ್ರೆ ಮೊದಲಾದ ಕಾರ್ಯಕ್ರಮಗಳಿಗೆ ಹಲವು ತಿಂಗಳವರೆಗೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ದುಡಿಮೆ ಇಲ್ಲದೆ, ಗಳಿಕೆಯೂ ಇಲ್ಲದೆ ನಾವು ಬಹಳ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸರ್ಕಾರದ ಯಾವುದೇ ಸಹಾಯವನ್ನೂ ಬಯಸದೆ ಕಾಯಕವನ್ನೇ ನಂಬಿ ಬದುಕುತ್ತಿದ್ದೆ ನಮಗೆ ಕೊರೊನಾ ವೈರಸ್‌ ಸೃಷ್ಟಿಸಿದ ಬಿಕ್ಕಟ್ಟು ಭಾರಿ ಬರೆ ಎಳೆದಿದೆ. ಈಗಲೂ ಕೆಲಸ ಇಲ್ಲದಂತಾಗಿದೆ. ಪರಿಣಾಮ ಜೀವನ ನಿರ್ವಹಣೆಯೇ ದುಸ್ತರವಾಗಿದೆ’ ಎಂದು ತಿಳಿಸಿದರು.

‘ಈಗ ಮದುವೆ ಸಮಾರಂಭಗಳಿಗೆ ಅವಕಾಶ ಕೊಡಲಾಗಿದೆ. ಆ ವೇಳೆಯಲ್ಲಿ ಮಂಗಳವಾದ್ಯ ಮತ್ತು ಬ್ರಾಸ್‌ ಬ್ಯಾಂಡ್‌ಗಳನ್ನು ನುಡಿಸಲು ಅನುಮತಿ ನೀಡಬೇಕು. ಈ ಮೂಲಕ ನಮಗೆ ಕೆಲಸ ದೊರೆಯುವಂತೆ ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ADVERTISEMENT

ಅಧ್ಯಕ್ಷ ಪರಶುರಾಮ ವಾಜಂತ್ರಿ, ಉಪಾಧ್ಯಕ್ಷ ಬಸವರಾಜ ಭಜಂತ್ರಿ, ಸಾಂಸ್ಕೃತಿಕ ಕಾರ್ಯದರ್ಶಿ ಪರಶುರಾಮ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಸಂತೋಷ ಭಜಂತ್ರಿ, ಉಪ ಕಾರ್ಯದರ್ಶಿ ಹಣಮಂತ ಭಜಂತ್ರಿ ಹಾಗೂ ಖಜಾಂಚಿ ಅಶೋಕ ಭಜಂತ್ರಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.