ಗೋಕಾಕ: ಅನಾಮಿಕ ವ್ಯಕ್ತಿಯನ್ನು ಬಳಸಿಕೊಂಡು ಗಿರೀಶ ಮಟ್ಟನ್ನವರ, ಮಹೇಶ ತಿಮರೊಡ್ಡಿ, ಜಯಂತ ಟಿ. ಹಾಗೂ ಸಮೀರ್ ಎಂ.ಡಿ. ಅವರು ಧರ್ಮಸ್ಥಳ ಮಂಜುನಾಥ ದೇವಾಲಯದ ಪಾವಿತ್ರ್ಯತೆಗೆ ಕಳಂಕ ಮತ್ತು ಧಕ್ಕೆ ತರುತ್ತಿದ್ದಾರೆ. ಅವರ ಒಳ ಸಂಚಿನ ವಿರುದ್ಧ ತನಿಖೆ ಕೈಗೊಳ್ಳಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಸದಸ್ಯರು ತಹಶೀಲ್ದಾರ್‌ಗೆ ಗುರುವಾರ ಮನವಿ ಸಲ್ಲಿಸಿದರು.
ಅದಕ್ಕೂ ಮೊದಲು ಸಾವಿರಾರು ಜನ ಮಂಜುನಾಥಸ್ವಾಮಿ ಭಕ್ತಾಭಿಮಾನಿಗಳು ಇಲ್ಲಿನ ಬಸವೇಶ್ವರ ವೃತ್ತದಿಂದ ಭಿತ್ತಿ ಪತ್ರಗಳೊಂದಿಗೆ ಪ್ರತಿಭಟನೆ ನಡೆಸಿ, ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿದರು.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವಂತಹ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುತ್ತಿದ್ದಾರೆ. ದೇವಾಲಯವನ್ನೇ ಗುರಿಯಾಗಿಸಿಕೊಂಡು ಆರೋಪಗಳನ್ನು ಮಾಡುತ್ತಿರುವುದರಿಂದ ಧಾರ್ಮಿಕ ಭಾವನೆ ಹಾಗೂ ನಂಬಿಕೆಗಳಿಗೆ ನಿರಂತರವಾಗಿ ಧಕ್ಕೆಯಾಗುತ್ತಿದೆ. ನೋಡುಗರಿಗೆ ಈ ಆರೋಪಗಳು ಸುಳ್ಳು ಎಂದು ಸ್ಪಷ್ಟವಾಗಿ ಗೋಚರಿಸುತ್ತಿವೆ. ನಾವುಗಳು ಹುಟ್ಟಿನಿಂದ ಆರಾಧಿಸಿಕೊಂಡು ಬಂದಿರುವ ಮಂಜುನಾಥ ಸ್ವಾಮಿ ಹಾಗೂ ಹೆಗ್ಗಡೆಯವರ ಕುರಿತು ಅಪಪ್ರಚಾರ ಮಾಡುತ್ತ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಿಬಿಡುತ್ತಿರುವವರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ನಾರಾಯಣ ಮಠಾಧಿಕಾರಿ, ಅಶೋಕ ಪೂಜಾರಿ, ಶಾಮಾನಂದ ಪೂಜೇರಿ, ಸೋಮಶೇಖರ ಮಗದುಮ, ಮಹಾಂತೇಶ ತಾಂವಶಿ, ಸದಾಶಿವ ಗುದಗ್ಗಗೋಳ, ಶೀತಲ ಡೋಂಗರೆ, ಮಹಾವೀರ ಖಾರೆಪಾಠಣ, ಈಶ್ವರ ಬಾಗೋಜಿ, ಬಾಬು ಮುಳಗುಂದ, ಸಂತೋಷ ಶೆಟ್ಟಿ, ಬಲದೇವ ಸಣ್ಣಕ್ಕಿ, ರಾಜೇಶ್ವರಿ ಒಡೆಯರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.