ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಕುರಿಗಾರರು ನೆಲೆಸಿದ ಸ್ಥಳಗಳಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಹಾಗೂ ಮುಖ್ಯ ಪಶುವೈಧ್ಯಾಧಿಕಾರಿ ಡಾ.ಶ್ರೀಕಾಂತ ಗಾಂವಿ ಅವರು ಕುರಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಔಷಧಗಳನ್ನು ವಿತರಿಸಿದರು.
ಪಶು ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿತರಿಸುವ ಔಷಧೋಪಚಾರಗಳನ್ನು ಕಡ್ಡಾಯವಾಗಿ ಪಡೆದುಕೊಂಡು ಪ್ರಸ್ತುತ ದಿನಗಳಲ್ಲಿ ಕುರಿ ಮತ್ತು ಆಡುಗಳಿಗೆ ಹಲವಾರು ರೀತಿಯ ಕಾಯಿಲೆಗಳು, ಕಾಲುಬೆನಿ ಮತ್ತು ಸಾಂಕ್ರಮಿಕ ರೋಗಗಳು ಹರಡದಂತೆ ಎಚ್ಚರವಹಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಕುರಿ ತಳಿಗಳನ್ನು ಅಭಿವೃದ್ಧಿ ಪಡಿಸಿಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಗ್ರಾಮೀಣ ಪ್ರದೇಶ ಕುರಿಗಾಯಿಗಳಿಗೆ ನರೇಗಾ ಯೋಜನೆಯಲ್ಲಿ ಸಮುದಾಯ, ವೈಯಕ್ತಿಕ ಆಡು, ಕುರಿ ಶೆಡ್ಡ್ ಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅದನ್ನು ಸದುಪಯೋಗ ಪಡೆಸಿಕೊಂಡು ಕುರಿ ಸಂತತಿಯನ್ನು ಅಭಿವೃದ್ಧಿ ಪಡಿಸಿರಿ ಇಒ ಸುಭಾಷ ಸಂಪಗಾವಿ ತಿಳಿಸಿದರು.
ಶ್ರೀಕಾಂತ್ ಗಾಂವಿ ಕುರಿಗಳಿಗೆ ಬರುವ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ ಹಾಕುವ ಮಹತ್ವ ಹಾಗೂ ಇಲಾಖೆಯಿಂದ ಕುರಿಗಾರರಿಗೆ ದೊರಕುವ ಯೋಜನೆಗಳ ಸೌಲಭ್ಯ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ ಸುಮಾರು 984 ಕುರಿ, ಮೇಕೆಗಳಿಗೆ ಜಂತುನಾಶಕ ಔಷಧ ವಿತರಿಸಿ ಎಲ್ಲ ಕುರಿ, ಮೇಕೆಗಳಿಗೆ ಪಿ.ಪಿ.ಆರ್.(ಕುರಿ, ಮೇಕೆಗಳಿಗೆ ಬರುವ ದೊಡ್ಡ ರೋಗ) ಲಸಿಕೆ ಹಾಕಲಾಯಿತು.
ಸಂಚಾರಿ ಮುಖ್ಯ ಪಶುವೈದ್ಯಾಧಿಕಾರಿ ಡಾ. ವಿರೂಪಾಕ್ಷಿ ಅಡ್ಡಣಗಿ, ಅಭಿವ್ರದ್ಧಿ ಅಧಿಕಾರಿ ವಿನಾಯಕ ಕದಂ, ತಾಪಂ ಐಇಸಿ ಸಂಯೋಜಕ ಎಸ್.ವಿ. ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.