ADVERTISEMENT

ಎನ್ಎಸ್ಎಸ್ ಶಿಬಿರಗಳಲ್ಲಿ ತೊಡಗಿಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:57 IST
Last Updated 29 ಮೇ 2025, 14:57 IST
ಚಿತ್ರ: 29ಜಿಕೆಕೆ2 ಗೋಕಾಕ ತಾಲ್ಲೂಕಿನ ಹಿರೇನಂದಿ ಗ್ರಾಮದಲ್ಲಿ ಅರಭಾವಿಯ ಕಿತ್ತೂರು ರಾಣಿ ಚೆನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯದ ಎನ್.ಎಸ್.ಎಸ್. ಶಿಬಿರದ ಏಳನೇ ದಿನದ ಕಾರ್ಯಕ್ರಮಕ್ಕೆ ಡೀನ್ ಡಾ. ಎಂ.ಜಿ.ಕೆರುಟಗಿ ಚಾಲನೆ ನೀಡಿದರು. ಚಿತ್ರದಲ್ಲಿ ಡಾ. ಕೆ.ರಾಮಚಂದ್ರ ನಾಯ್ಕ, ಸಿದ್ಧಲಿಂಗಯ್ಯ ಪೂಜಾರಿ ಮತ್ತಿತರರು ಇದ್ದಾರೆ.
ಚಿತ್ರ: 29ಜಿಕೆಕೆ2 ಗೋಕಾಕ ತಾಲ್ಲೂಕಿನ ಹಿರೇನಂದಿ ಗ್ರಾಮದಲ್ಲಿ ಅರಭಾವಿಯ ಕಿತ್ತೂರು ರಾಣಿ ಚೆನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯದ ಎನ್.ಎಸ್.ಎಸ್. ಶಿಬಿರದ ಏಳನೇ ದಿನದ ಕಾರ್ಯಕ್ರಮಕ್ಕೆ ಡೀನ್ ಡಾ. ಎಂ.ಜಿ.ಕೆರುಟಗಿ ಚಾಲನೆ ನೀಡಿದರು. ಚಿತ್ರದಲ್ಲಿ ಡಾ. ಕೆ.ರಾಮಚಂದ್ರ ನಾಯ್ಕ, ಸಿದ್ಧಲಿಂಗಯ್ಯ ಪೂಜಾರಿ ಮತ್ತಿತರರು ಇದ್ದಾರೆ.   

ಪ್ರಜಾವಾಣಿ ವಾರ್ತೆ

ಗೋಕಾಕ: ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡರೆ ಅದೊಂದು ಬಗೆಯ ವಿಶೇಷ ತರಬೇತಿ ಹೊಂದಿದಂತೆ ಎಂದು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಕೆ.ರಾಮಚಂದ್ರ ಹೇಳಿದರು.

ತಾಲ್ಲೂಕಿನ ಹಿರೇನಂದಿ ಗ್ರಾಮದಲ್ಲಿ ಅರಭಾವಿಯ ಕಿತ್ತೂರು ರಾಣಿ ಚೆನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಎನ್‌.ಎಸ್‌.ಎಸ್‌ ಶಿಬಿರದ 7ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಪ್ರತಿವರ್ಷದಂತೆ ಉತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮುವ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯ ಮಟ್ಟದಲ್ಲಿ ನೀಡಲಾಗುವ ಬಂಗಾರದ ಪದಕವನ್ನು ಮುಂಬರುವ ವರ್ಷಗಳಲ್ಲಿ ತಮ್ಮ ಪ್ರಾಯೋಜಕತ್ವದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ನೀಡಲಾಗುವುದು ಎಂದು ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಡೀನ್‌ ಡಾ.ಎಂ.ಜಿ.ಕೆರುಟಗಿ ಮಾತನಾಡಿ, ಶಿಬಿರಾರ್ಥಿಗಳು ಜೀವನದಲ್ಲಿ ಪರಿಶ್ರಮ ಪಡುವುದನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.

ಎನ್.ಎಸ್.ಎಸ್. ಅಧಿಕಾರಿ ಡಾ.ಎಸ್.ಜಿ. ಪ್ರವೀಣಕುಮಾರ, ಡಾ ಪ್ರತೀಕ್ಷಾ, ಡಾ. ರಾಘವೇಂದ್ರ ಕೆ.ಎಸ್., ಪೋಷಕ ಸಿಬ್ಬಂದಿ ಡಾ. ಶಶಿಧರ ದೊಡಮನಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ತದನಂತರ ಎನ್.ಎಸ್.ಎಸ್. ಸ್ವಯಂ ಸೇವಕರು ತಮಗಾದ ವೈಯಕ್ತಿಕ ಅನುಭವಗಳನ್ನು ವೇದಿಕೆ ಮೂಲಕ ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು.

ವೇದಿಕೆಯಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಸಿದ್ದಲಿಂಗಯ್ಯ ಪೂಜಾರಿ, ಗ್ರಾಮದ ಪ್ರಮುಖ ಗಂಗಾಧರ ಹಾರೋಗೊಪ್ಪ, ಗ್ರಾ.ಪಂ. ಉಪಾಧ್ಯಕ್ಷ ವಿಠಲ ಪೂಜಾರಿ, ಗ್ರಾ.ಪಂ. ಸದಸ್ಯ ಬಸವರಾಜ ಹಾರೋಗೊಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.