ADVERTISEMENT

ಸತೀಶ– ಶಿವಕುಮಾರ್‌ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 20:33 IST
Last Updated 19 ಜನವರಿ 2025, 20:33 IST
<div class="paragraphs"><p>ಡಿ.ಕೆ. ಶಿವಕುಮಾರ್‌ ಅವರನ್ನು ಸತೀಶ ಜಾರಕಿಹೊಳಿ ಭೇಟಿ <br></p></div>

ಡಿ.ಕೆ. ಶಿವಕುಮಾರ್‌ ಅವರನ್ನು ಸತೀಶ ಜಾರಕಿಹೊಳಿ ಭೇಟಿ

   

ಬೆಳಗಾವಿ: ಕಳೆದ ಮೂರು ದಿನಗಳಿಂದ ನಗರದಲ್ಲೇ ಇದ್ದರೂ ಡಿ.ಕೆ.ಶಿವಕುಮಾರ್‌ ಹಾಗೂ ಸತೀಶ ಜಾರಕಿಹೊಳಿ ಪರಸ್ಪರ ಭೇಟಿಯಾಗಿರಲಿಲ್ಲ. ಮುಖ ಕೊಟ್ಟು ಮಾತನಾಡದಷ್ಟು ಮುನಿಸಿಕೊಂಡಿದ್ದರು. ಭಾನುವಾರ ಇಬ್ಬರೂ ‍ಪತ್ರಿಕಾಗೋಷ್ಠಿಗೆ ಬಂದು ಮಾಧ್ಯಮಗಳ ಮುಂದೆ ‘ಪೋಸ್‌’ ಕೊಟ್ಟರು.

ಜ.21ರಂದು ಇಲ್ಲಿ ಹಮ್ಮಿಕೊಂಡ ‘ಜೈ ಬಾಪು, ಜೈ ಭೀಮ್‌ ಮತ್ತು ಜೈ ಸಂವಿಧಾನ’ ಸಮಾವೇಶದ ಹಿನ್ನೆಲೆಯಲ್ಲಿ ಸಿಪಿಇಡಿ ಮೈದಾನದಲ್ಲಿ ನಿರ್ಮಿಸಿದ ಬೃಹತ್ ವೇದಿಕೆಯ ಅಂತಿಮ ಹಂತದ ಸಿದ್ಧತೆ ಪರಿಶೀಲಿಸುವಾಗ ಹಸ್ತಲಾಘವ ಮಾಡುವ ಜತೆಗೆ, ಅಕ್ಕ–ಪಕ್ಕದಲ್ಲೇ ಕುಳಿತು ಸಮಾವೇಶದ ವಿಡಿಯೊ ಟೀಸರ್ ವೀಕ್ಷಿಸಿದರು. ಸಚಿವರಾದ ಜಮೀರ್ ಅಹಮದ್‌ ಖಾನ್‌, ಎಂ.ಸಿ.ಸುಧಾಕರ, ಮಾಜಿ ಸಂಸದ ಡಿ.ಕೆ.ಸುರೇಶ ಇತರರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.