ADVERTISEMENT

ನಿಯಮ ಉಲ್ಲಂಘನೆ: ಡಿಎಲ್, ಆರ್‌ಸಿ ಅಮಾನತು!

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 15:31 IST
Last Updated 2 ಜುಲೈ 2019, 15:31 IST

ಬೆಳಗಾವಿ: ನಿಯಮ ಮೀರಿ ಸಂಚರಿಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ಸಂಚಾರ ಪೊಲೀಸರು, ಪ್ರಕರಣ ದಾಖಲಿಸಿ ದಂಡ ವಿಧಿಸುವುದಲ್ಲದೇ ಡಿಎಲ್ (ಚಾಲನಾ ಪರವಾನಗಿ) ಹಾಗೂ ಆರ್‌ಸಿ ಅಮಾನತಿನಂತಹ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದ್ದಾರೆ.

‘ನಗರದಲ್ಲಿ ಆಟೊರಿಕ್ಷಾ, ಬಸ್, ಮಿನಿ ಬಸ್‌ಗಳಲ್ಲಿ ನಿಗದಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಸಾಗಿಸುವ ಹಾಗೂ ಸರಕು ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸುವ ವಾಹನಗಳ ವಿರುದ್ಧ ಕ್ರಮ ವಹಿಸಲಾಗುತ್ತಿದೆ. ತಪ್ಪಿತಸ್ಥ ವಾಹನ ಚಾಲಕರ ವಿರುದ್ಧ ಮೋಟರ್ ವಾಹನ ಕಾಯ್ದೆಯಡಿ 109 ಪ್ರಕರಣಗಳನ್ನು ದಾಖಲಿಸಿ ₹ 17,100 ಹಾಗೂ ಇತರ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ 17 ಪ್ರಕರಣಗಳನ್ನು ದಾಖಲಿಸಿ ₹ 1,500 ದಂಡ ವಸೂಲಿ ಮಾಡಲಾಗಿದೆ. ತಪ್ಪಿತಸ್ಥ 11 ಚಾಲಕ, ಮಾಲೀಕರ ಡಿಎಲ್, ಆರ್‌ಸಿ ಅಮಾನತುಗೊಳಿಸಲು ಸಾರಿಗೆ ಇಲಾಖೆಗೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT