ADVERTISEMENT

ಯಶಸ್ಸು ಸಾಧಿಸಲು ಪರಿಶ್ರಮ ಅಗತ್ಯ: ಡಾ.ಎಸ್.ಎಸ್. ಗಡೇದ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 13:11 IST
Last Updated 3 ಜುಲೈ 2021, 13:11 IST
ಗೋಕಾಕದ ಸರ್ಕಾರಿ ಆಸ್ಪತ್ರೆಯಲ್ಲಿ ಈಚೆಗೆ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಎಡಿಎಚ್‌ಒ ಡಾ.ಎಸ್.ಎಸ್. ಗಡೇದ ಮೊದಲಾದವರು ಉದ್ಘಾಟಿಸಿದರು
ಗೋಕಾಕದ ಸರ್ಕಾರಿ ಆಸ್ಪತ್ರೆಯಲ್ಲಿ ಈಚೆಗೆ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಎಡಿಎಚ್‌ಒ ಡಾ.ಎಸ್.ಎಸ್. ಗಡೇದ ಮೊದಲಾದವರು ಉದ್ಘಾಟಿಸಿದರು   

ಗೋಕಾಕ (ಬೆಳಗಾವಿ ಜಿಲ್ಲೆ): ‘ವೈದ್ಯರು ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಉತ್ತುಂಗಕ್ಕೇರಲು ಪರಿಶ್ರಮದ ಅಗ್ಯವಿದೆ. ನಿಸ್ವಾರ್ಥ ಸೇವೆಯಿಂದ ಗೌರವ ವೃದ್ಧಿಸುತ್ತದೆ ಮತ್ತು ಸಾರ್ಥಕತೆ ಲಭಿಸುತ್ತದೆ’ ಎಂದು ಎಡಿಎಚ್‌ಒ ಡಾ.ಎಸ್.ಎಸ್. ಗಡೇದ ಹೇಳಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಈಚೆಗೆ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಆಹೋರಾತ್ರಿ ಕಾರ್ಯನಿರ್ವಹಿಸಿದ ಡಾ. ಐ.ಟಿ. ಗಡಾದ, ಡಾ.ಪ್ರಭು ಬಿರಾದರ, ಡಾ.ಶಶಿಕಾಂತ ಮುನ್ಯಾಳ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಡಾ.ಮಹಾಂತೇಶ ಕಡಾಡಿ, ಡಾ.ಪವನ ದೇಶಪಾಂಡೆ ಅವರನ್ನು ಸತ್ಕರಿಸಲಾಯಿತು.

ADVERTISEMENT

ಮಧುರ ಸಂಗೀತ ಬಳಗ ಮತ್ತು ಅಮ್ಮಾಜಿ ನೃತ್ಯ ಶಾಲೆ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.

ಡಾ.ಅಶೋಕ ಜೀರಗ್ಯಾಳ, ಡಾ.ವಿಶ್ವನಾಥ ಭೋವಿ, ಡಾ.ಭೀಮಶಿ ಬಾಗಲಕೋಟಿ, ಡಾ.ಮಂಗಲಾ ಸನದಿ, ಡಾ.ಪವನಕುಮಾರ, ಡಾ.ಸಂದೀಪ ಕೋಲಕಾರ, ಡಾ.ಪವಿತ್ರಾ ದಂಡಿನ, ಡಾ.ಶಾಂತಾ ಇದ್ದರು.

ಶಿಕ್ಷಕ ರಾಮಚಂದ್ರ ಕಾಕಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.