ADVERTISEMENT

ಬೆಳಗಾವಿ | ಮಾದಕವಸ್ತು ಮಾರಾಟ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:02 IST
Last Updated 29 ಜುಲೈ 2025, 2:02 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಳಗಾವಿ: ಇಲ್ಲಿನ ಸಮರ್ಥ ನಗರದ ಏಳನೇ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಭಾನುವಾರ ಮಾದಕವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಸಮರ್ಥ ನಗರದ ಅನಿಕೇತ ರಾಮಾ ಲೋಹಾರ(27), ತಾಲ್ಲೂಕಿನ ಮಚ್ಛೆಯ ಅಲ್ತಮಶ್ ಅಯೂಬ್‌ಖಾನ್‌ ಪಠಾಣ(25), ಸದ್ದಾಮ್‌ಹುಸೇನ್‌ ಸರ್ದಾರ್‌ ಪಠಾಣ(24) ಬಂಧಿತರು. ಅವರಿಂದ ₹48,400 ಮೌಲ್ಯದ 60.36 ಗ್ರಾಂ ಹೆರಾಯಿನ್, ₹1 ಲಕ್ಷ ಮೌಲ್ಯದ ಆಟೊರಿಕ್ಷಾ ವಶಕ್ಕೆ ಪಡೆಯಲಾಗಿದೆ.

ADVERTISEMENT

ಇಬ್ಬರ ಬಂಧನ: ಬೆಳಗಾವಿಯ ಶಿವಬಸವ ನಗರದಲ್ಲಿ ಭಾನುವಾರ ಗಾಂಜಾ ಮಾರುತ್ತಿದ್ದ ಗ್ಯಾಂಗವಾಡಿಯ ರವಿ ಲೊಂಡೆ(50) ಎಂಬಾತನನ್ನು ಮಾಳಮಾರುತಿ  ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹5,100 ಮೌಲ್ಯದ 255 ಗ್ರಾಂ ಗಾಂಜಾ, ₹800 ನಗದು ವಶಪಡಿಸಿಕೊಳ್ಳಲಾಗಿದೆ. 

ಮತ್ತೊಂದು ಪ್ರಕರಣದಲ್ಲಿ ಬೆಳಗಾವಿ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಭಾನುವಾರ ಗಾಂಜಾ ಸೇವಿಸುತ್ತಿದ್ದ ಹಿಂಡಲಗಾದ ವಿಜಯನಗರದ ಪ್ರಸಾದ ಚಿಟ್ಟಿಬಾಬು ಪರಶಭೋಗ (23) ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ: ಬೆಳಗಾವಿ ಎಪಿಎಂಸಿ ಗೇಟ್‌ ಬಳಿ ಭಾನುವಾರ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಕಂಗ್ರಾಳಿಯ ಅಶೋಕ ರಾಮಾ ಪಾಟೀಲ(45) ಎಂಬಾತನನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಆತನಿಂದ 7.11 ಲೀಟರ್ ಮದ್ಯ, ₹410 ನಗದು ಸೇರಿದಂತೆ ₹4,280 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಶಸ್ತ್ರಾಸ್ತ್ರ ಇಟ್ಟುಕೊಂಡವನ ಬಂಧನ: ಬೆಳಗಾವಿಯ ಹಳೇ ಪಿ.ಬಿ. ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಕೆಳಗೆ ಭಾನುವಾರ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಸಂಭಾಜಿ ಗಲ್ಲಿಯ ಪ್ರಜ್ವಲ ಶಂಕರ ಕಿತ್ತವಾಡಕರ(28) ಎಂಬಾತನನ್ನು ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿ, ಹರಿತವಾದ ಸ್ಟೀಲ್ ಚಾಕು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.