ADVERTISEMENT

ಮಕ್ಕಳನ್ನು ಗುಡಿ ಮೇಲಿಂದ ಹಾಕಿದ ಭಕ್ತರು!

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 16:31 IST
Last Updated 1 ಸೆಪ್ಟೆಂಬರ್ 2019, 16:31 IST
ಅಥಣಿ ತಾಲ್ಲೂಕಿನ ಗುಂಡೇವಾಡಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಸಂದರ್ಭದಲ್ಲಿ ಭಕ್ತರು ಮಗುವನ್ನು ದೇವಸ್ಥಾನದ ಮೇಲಿಂದ ಎಸೆದ ಕ್ಷಣ
ಅಥಣಿ ತಾಲ್ಲೂಕಿನ ಗುಂಡೇವಾಡಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಸಂದರ್ಭದಲ್ಲಿ ಭಕ್ತರು ಮಗುವನ್ನು ದೇವಸ್ಥಾನದ ಮೇಲಿಂದ ಎಸೆದ ಕ್ಷಣ   

ಅಥಣಿ: ತಾಲ್ಲೂಕಿನ ಗುಂಡೇವಾಡಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಸಂದರ್ಭದಲ್ಲಿ ಕೆಲವು ಭಕ್ತರು ಮಕ್ಕಳನ್ನು ದೇವಸ್ಥಾನದ ಮೇಲಿಂದ ಎಸೆದು ಹರಕೆ ತೀರಿಸಿದರು.

ದೇವಸ್ಥಾನದ ಕೆಳಗೆ ಕೆಲವರು ರಗ್ಗುಗಳನ್ನು ಹಿಡಿದು ನಿಂತಿರುತ್ತಾರೆ. ಅಲ್ಲಿಗೆ ಭಕ್ತರು ಮಕ್ಕಳನ್ನು ಹಾಕುತ್ತಾರೆ. ಹೀಗೆ ಮಾಡುವುದರಿಂದ ಒಳಿತಾಗುತ್ತದೆ, ಇಷ್ಟಾರ್ಥಗಳು ಸಿದ್ಧಿಸುತ್ತವೆ ಎನ್ನುವ ನಂಬಿಕೆ ಹಿಂದಿನಿಂದಲೂ ಇಲ್ಲಿನ ಜನರಲ್ಲಿದೆ.

ಇದೇ ವೇಳೆ, ದೇವಿ ಮೂರ್ತಿಯ ಮೆರವಣಿಗೆ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.