ADVERTISEMENT

ಖಾನಾಪುರ: ರಸ್ತೆಗೆ ಬಂದ ಒಂಟಿಸಲಗ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 8:16 IST
Last Updated 23 ಮಾರ್ಚ್ 2024, 8:16 IST
   

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಂದಗಡ- ಬೀಡಿ ರಸ್ತೆಯ (ಬೆಳಗಾವಿ- ತಾಳಗುಪ್ಪ ರಾಜ್ಯ ಹೆದ್ದಾರಿ) ಬೇಕವಾಡ ಕ್ರಾಸ್ ಬಳಿ ಶನಿವಾರ ಮಧ್ಯಾಹ್ನ ಒಂಟಿಸಲಗ ಕಾಣಿಸಿಕೊಂಡಿತು.

ಆನೆ ಜುಂಜವಾಡ- ಬೇಕವಾಡ ಮಧ್ಯದಲ್ಲಿ ರಸ್ತೆ ದಾಟಿ ಜುಂಜವಾಡ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಗಳಲ್ಲಿ ನುಗ್ಗಿದೆ.

ಆನೆ ಕಂಡು ಜನ ಅದರ ಫೋಟೊ, ವಿಡಿಯೊ ಮಾಡಿಕೊಳ್ಳಲು ಮುಂದಾದರು. ಇದರಿಂದ ಸ್ಥಳದಲ್ಲಿ ಜನಜಂಗುಳಿ ಏರ್ಪಟ್ಟಿತು.

ADVERTISEMENT

ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜನರನ್ನು ನಿಯಂತ್ರಿಸಿದರು. ಆನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ ಶುರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.