ಅಥಣಿ: ಯುವಕರು ಹೊಸ ಉದ್ಯಮದತ್ತ ಮುಖಮಾಡಿದರೆ ನಿರುದ್ಯೋಗ ಸಮಸ್ಯೆ ತಾನಾಗೆ ಪರಿಹಾರ ಆಗುತ್ತದೆ ಎಂದು ಶಾಸಕ ರಮೇಶ ಜಾರಕಿಹೋಳಿ ಹೇಳಿದರು .
ಪಟ್ಟಣದಲ್ಲಿ ಮಂಗಳವಾರ ಆರ್.ಎಸ್.ಪಿ ಲ್ಯಾಂಡ್ ಡೆವಲಪರ್ಸ್ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಈಗಿನ ಯುವಕರು ಸರಕಾರಿ ನೌಕರಿಗಾಗಿ ಕಾದು ತಮ್ಮ ಅರ್ಧ ವಯಸ್ಸು ಕಳೆದುಕೊಳ್ಳತ್ತಾರೆ. ನಂತರ ನಿರುದ್ಯೋಗಕ್ಕೆ ಒಳಗಾಗುತ್ತಾರೆ. ಸರ್ಕಾರಿ ನೌಕರಿಗಾಗಿ ಪ್ರಯತ್ನಿಸುವದೊಂದೆ ನಮ್ಮ ಉದ್ದೇಶವಾಗಬಾರದು. ನಾವೇ ಉದ್ಯೋಗ ಸೃಷ್ಟಿ ಮಾಡುವತ್ತ ಮನಸ್ಸು ಮಾಡಬೇಕು. ಯುವಕರು ನಿರುದ್ಯೋಗದಿಂದ ಹೊರ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಎಸ್.ಪಿ ಸಮುಹ ಸಂಸ್ಥೆ ಮುಖ್ಯಸ್ಥ ರವಿ ಪೂಜಾರಿ ಮಾತನಾಡಿ, ‘ಜೀವನದಲ್ಲಿ ನಾವಷ್ಟೆ ಬೆಳೆಯಬೇಕು ಎಂಬ ಆಸೆ ಇಟ್ಟುಕೊಂಡರೆ ನಮ್ಮ ಬೇಳವಣಿಗೆಯಲ್ಲಿ ಹಿನ್ನಡೆ ಆಗುತ್ತದೆ. ನಾವು ಹಿರಿಯರನ್ನು ಗೌರವಿಸಿಕೊಂಡು, ಕಿರಿಯರನ್ನು ಮುನ್ನೆಡೆಸಿಕೊಂಡು ಜೀವನ ಸಾಗಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಶ್ರೀಮಂತ ಪಾಟೀಲ,ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮುಖಂಡರಾದ ಧರೇಪ್ಪಾ ಠಕ್ಕಣ್ಣವರ, ನಾನಾಸಾಬ ಅವತಾಡೆ, ರಾವಸಾಬ ಪಾಟೀಲ, ಸಂತೋಷ ಕಕಮರಿ, ರಾಜೇಂದ್ರ ಐಹೋಳೆ, ಅಶೋಕ ಯಲ್ಲಡಗಿ, ಸತ್ಯಪ್ಪಾ ಬಾಗೆನ್ನವರ, ಮಲ್ಲಿಕಾರ್ಜುನ ಅಂದಾನಿ, ಚಿದಾನಂದ ಶೇಗುಣಸಿ, ಸಂಗಮೇಶ ಇಂಗಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.