ADVERTISEMENT

ಕಾಗವಾಡ: ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗಾಗಿ ಸಂಸದೆ ಪ್ರಿಯಾಂಕಾಗೆ ಮನವಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 2:25 IST
Last Updated 31 ಆಗಸ್ಟ್ 2025, 2:25 IST
ಕಾಗವಾಡ ತಾಲ್ಲೂಕಿನ ಉಗಾರ ಖುರ್ದ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗಾಗಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಕಾಗವಾಡ ತಾಲ್ಲೂಕಿನ ಉಗಾರ ಖುರ್ದ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗಾಗಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.   

ಕಾಗವಾಡ: ಅತಿ ದೊಡ್ಡ ಎರಡು ತಾಲ್ಲೂಕು ಹೊಂದಿರುವ ಕಾಗವಾಡ ಹಾಗೂ ಅಥಣಿ ಸಾರ್ವಜನಿಕರ ಅನುಕೂಲಕ್ಕಾಗಿ ದಾದರ-ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲನ್ನು ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಉಗಾರ ಖುರ್ದ ನಾಗರಿಕರು ಮನವಿ ಸಲ್ಲಿಸಿದರು.

ಪ್ರಿಯಾಂಕಾ ಜಾರಕಿಹೊಳಿ ಅವರು ಶೇಡಬಾಳ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ವೇಳೆ ಮನವಿ ಸಲ್ಲಿಸಿ ಮಾತನಾಡಿದ ಉಗಾರ ಪುರಸಭೆ ಸದಸ್ಯ ಪ್ರತಾಪ ಜತ್ರಾಟೆ ಅತಿ ದೊಡ್ಡ ರೈಲು ಪ್ರಯಾಣಿಕರ ಸಂಖ್ಯೆ ಹೊಂದಿರುವ ಕಾಗವಾಡ ಹಾಗೂ ಅಥಣಿ ಸುತ್ತಮುತ್ತಲಿನ ಸಾರ್ವಜನಿಕರಿಗೆ ಉಗಾರ ಖುರ್ದ ರೈಲು ನಿಲ್ದಾಣದಲ್ಲಿ ಹರಿಪ್ರಿಯಾ ಹಾಗೂ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲು ಮಾತ್ರ ನಿಲುಗಡೆ ಆಗುತಿದ್ದು ಬೆಳಗಿನ ಸಮಯದಲ್ಲಿ ಹಲವು ಕೆಲಸ ಕಾರ್ಯಗಳಿಗೆ ಹುಬ್ಬಳ್ಳಿ ಬೆಳಗಾವಿ, ಮಿರಜ, ಬೆಂಗಳೂರು ಕಡೆ ಪ್ರಯಾಣ ಬೆಳೆಸುವ ಉಗಾರ ಬುದ್ರುಕ, ಕುಸನಾಳ, ಮೊಳವಾಡ, ಮೋಳೆ, ಐನಾಪೂರ, ಶೇಡಬಾಳ ಸೇರಿದಂತೆ ಹಲವು ಊರುಗಳಿಂದ ರೈಲು ಪ್ರಯಾಣ ಬೆಳೆಸುವ ಜನರಿಗೆ ರೈಲು ಸೇವೆ ಬಹಳ ಮಹತ್ವದ್ದಾಗಿದೆ ಉಗಾರ ರೈಲು ನಿಲ್ದಾಣದಲ್ಲಿ ಮುಂಜಾನೆ ದಾದರ ಹುಬ್ಬಳ್ಳಿ (ಎಲ್.ಟಿ.ಟಿ.) ಎಕ್ಸಪ್ರೆಸ್ ಮತ್ತು ಸಂಜೆ ಹುಬ್ಬಳ್ಳಿ ದಾದರ ಎಕ್ಸಪ್ರೆಸ್ ರೈಲುಗಳು ನಿಂತರೆ ಇಲ್ಲಿಯ ಜನರಿಗೆ ಹೋಗಿ ಬರಲು ಅನುಕೂಲವಾಗುತ್ತದೆ ಆದ್ದರಿಂದ ಈ ರೈಲುಗಳನ್ನು ಉಗಾರ ಖುರ್ದ ರೈಲು ನಿಲ್ದಾಣದಲ್ಲಿ ನಿಲ್ಲಿಸಲು ಕ್ರಮ ವಹಿಸುವಂತೆ ಸಂಸದರಲ್ಲಿ ಮನಿವಿ ಮಾಡಲಾಗಿದೆ ಎಂದರು.

ಶಾಸಕ ರಾಜು ಕಾಗೆ, ವಿಜಯ ಅಸೂದೆ, ಅಮರ ಜಗತಾಪ, ಭರಮು ಮಾದರ, ಸೈಯದ್ ಪಾಗೆ, ಶಾಂತಿನಾಂಥ ಕಳೆ, ಬಸವರಾಜ ಪಾಟೀಲ, ವಿಶ್ವನಾಥ ಷೀರ್ಶಟ, ಸಚಿನ ಜಗತಾಪ ಸೇರಿದಂತೆ ಅನೇಕರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.