ADVERTISEMENT

ಉತ್ತಮ ಆರೋಗ್ಯಕ್ಕೆ ಪರಿಸರ ಸಂರಕ್ಷಣೆ ಅವಶ್ಯ: ಫಾದರ್ ಲೂರ್ದುಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:33 IST
Last Updated 10 ಜೂನ್ 2025, 13:33 IST
ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂನ ಮಿಖಾಯಿಲ್ ಚರ್ಚಿನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂನ ಮಿಖಾಯಿಲ್ ಚರ್ಚಿನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಡಲಾಯಿತು.   

ಹುಕ್ಕೇರಿ: ನಮ್ಮ ಸುತ್ತಮುತ್ತಲಿನ ಪರಿಸರ ಗಿಡಮರಗಳಿಂದ ಕೂಡಿದ್ದರೆ, ಪ್ರಾಣಿ ಪಕ್ಷಿಗಳಿಗೆ ಹಣ್ಣು ಹಂಪಲು ಹಾಗೂ ಮನುಷ್ಯನಿಗೆ ಆರೋಗ್ಯ ಲಭಿಸುತ್ತದೆ ಎಂದು ಹಿಡಕಲ್ ಡ್ಯಾಂನ ಮಿಖಾಯಿಲ್ ಚರ್ಚಿನ ಫಾದರ್ ಲೂರ್ದುಸ್ವಾಮಿ ಹೇಳಿದರು.

ಭಾನುವಾರ ಹಿಡಕಲ್ ಡ್ಯಾಂನ ಮಿಖಾಯಿಲ್ ಚರ್ಚಿನ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ಉತ್ತಮ ಪರಿಸರ ಇದ್ದರೆ ಕಾಲಕಾಲಕ್ಕೆ ಉತ್ತಮ ಮಳೆ ಆಗುತ್ತದೆ. ಪ್ರಾಣಿ ಪಕ್ಷಿಗಳು ಬದುಕಲು ಕಾಡು ಮುಖ್ಯವಾಗಿರುತ್ತದೆ. ಪರಿಸರ ನಾಶದಿಂದ ಮನುಷ್ಯನಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಹಲವಾರು ತೊಂದರೆಗಳಾಗುತ್ತವೆ. ಮನುಷ್ಯನ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ವಿಶ್ವ ನಾಯಕರು ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆ ಆಚರಿಸುವುದರ ಮೂಲಕ ಜನರು ಪರಿಸರ ರಕ್ಷಣೆಗೆ ಬದ್ಧರಾಗಬೇಕು ಎಂಬ ಆಶಯ ಹೊಂದಿದ್ದಾರೆ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಸಾವಳಗಿ, ಪಾಶ್ಚಾಪುರ,ಗಮಚನಮರಡಿ ಗ್ರಾಮಸ್ಥರು, ಸಂತ ತೆರೇಸಾ ಶಾಲೆಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.