ADVERTISEMENT

ಐಗಳಿ: ಸಾಧಕರಿಗೆ ಸತ್ಕಾರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 10:58 IST
Last Updated 15 ಜನವರಿ 2022, 10:58 IST
ಐಗಳಿಯಲ್ಲಿ ದಿವಂಗತ ಗುರುಪಾದಗೌಡ ಪಾಟೀಲ ದಂಪತಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಟೀಲ ಸಹೋದರರು ಸಾಧಕರನ್ನು ಸತ್ಕರಿಸಿದರು
ಐಗಳಿಯಲ್ಲಿ ದಿವಂಗತ ಗುರುಪಾದಗೌಡ ಪಾಟೀಲ ದಂಪತಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಟೀಲ ಸಹೋದರರು ಸಾಧಕರನ್ನು ಸತ್ಕರಿಸಿದರು   

ಐಗಳಿ: ಇಲ್ಲಿನ ಪಾಟೀಲ ಸಹೋದರರು ದಿವಂಗತ ಗುರುಪಾದಗೌಡ ಪಾಟೀಲ ದಂಪತಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿದರು.

ಐಗಳಿ ಗ್ರಾ.ಪಂ. ಅಧ್ಯಕ್ಷೆ ರಾಜಶ್ರೀ ಶಂಕರಗೌಡ ಪಾಟೀಲ, ಅಡಹಳ್ಳಿಯ ಗ್ರಾ.ಪಂ. ಅಧ್ಯಕ್ಷೆ ವಿಜಯಲಕ್ಷಿ ಸುನೀಲ ಕೆಂಚಣ್ಣವರ, ಚನ್ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಧರೆಪ್ಪ ಠಕ್ಕಣ್ಣವರ ಮತ್ತು ಪಂಚಮಸಾಲಿ ಸಮಾಜ ತಾಲ್ಲೂಕು ಘಟಕದ ಅಧ್ಯಕ್ಷ ಅವಿನಾಶ ನಾಯಿಕ, ನಗರ ಘಟಕದ ಅಧ್ಯಕ್ಷ ಪರಶುರಾಮ ನಂದೇಶ್ವರ ಹಾಗೂ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಹುನ್ನೂರ ಅವರನ್ನು ಸತ್ಕರಿಸಿದರು.

‘ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಪಾಟೀಲ ಸಹೋದರರು ಸಾಗುತ್ತಾ ಅವಿಭಕ್ತ ಕುಟುಂಬಕ್ಕೆ ಮಾದರಿಯಾಗಿದ್ದಾರೆ’ ಎಂದು ನಂದಗಾಂವದ ಭೂ ಕೈಲಾಸ ಮಂದಿರ ಪೀಠಾಧ್ಯಕ್ಷ ಮಹಾದೇವ ಮಹಾರಾಜ ಹೇಳಿದರು.

ADVERTISEMENT

‘ಮನಃಶಾಂತಿಗಾಗಿ ಪ್ರವಚನ, ಶಿವಾನುಭವ ಮೊದಲಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ತಾಯಿ, ತಂದೆ ಹಾಗೂ ಗುರುವಿನ ಸೇವೆಯಲ್ಲಿ ತೃಪ್ತಿ ಸಿಗುತ್ತದೆ. ಗಳಿಕೆಯಲ್ಲಿ ಕೆಲ ಭಾಗವನ್ನು ಸೇವೆಗೆ ಮೀಸಲಿಡಬೇಕು’ ಎಂದರು.

ಕೋಹಳ್ಳಿಯ ಪರಶುರಾಮ ಮಹಾರಾಜ, ಹುನ್ನೂರಿನ ಪ್ರಕಾಶ ಮಹಾರಾಜ, ಯಲಹಡಗಿಯ ಬಾಳು ಮಹಾರಾಜ, ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿಂಗನಗೌಡ ಪಾಟೀಲ, ವಿಜಯಪುರದ ಸಿಪಿಐ ಮಲ್ಲಿಕಾರ್ಜುನ ಮಾತನಾಡಿದರು.

ಸಿದಗೌಡ ಪಾಟೀಲ ದಂಪತಿ ಗದ್ದುಗೆ ಪೂಜೆ ನೆರವೇರಿಸಿದರು. ಮುಖಂಡರಾದ ಶ್ಯಾಮು ತೆಲಸಂಗ, ಚನ್ನಪ್ಪ ಹಾಲಳ್ಳಿ, ಅಪ್ಪುಗೌಡ ಪಾಟೀಲ, ಮಹಾದೇವ ಹಾಲಳ್ಳಿ, ಎಂಜಿನಿಯರ್‌ ರಾಜಶೇಖರ ಟೋಪಗಿ, ಮುರಘೇಂದ್ರ ಬ್ಯಾಂಕ್‌ ನಿರ್ದೇಶಕ ರುದ್ರಯ್ಯ ಹಿರೇಮಠ, ಭಾರತ ಬ್ಯಾಂಕ್‌ ಅಧ್ಯಕ್ಷ ನೂರಅಹ್ಮದ ಡೊಂಗರಗಾಂವ, ಎಲ್.ಎಸ್. ಬಿರಾದಾರ, ಡಾ.ಬಸಗೌಡ ಪಾಟೀಲ ಪಾಲ್ಗೊಂಡಿದ್ದರು.

ನಿಂಗನಗೌಡ ಪಾಟೀಲ ಸ್ವಾಗತಿಸಿದರು. ಕೇದಾರಿಗೌಡ ಬಿರಾದಾರ ನಿರೂಪಿಸಿದರು. ಮಲಗೌಡ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.