ADVERTISEMENT

‘ಹಂಚಿ ತಿನ್ನುವುದರಿಂದ ನೆಮ್ಮದಿ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 9:00 IST
Last Updated 25 ಸೆಪ್ಟೆಂಬರ್ 2021, 9:00 IST
ತೆಲಸಂಗದಲ್ಲಿ ಶ್ರೀಶೈಲಂ ದಾಸೋಹ ಸೇವಾ ಸಮಿತಿಯ ಚನ್ನಪ್ಪ ದಶಮಾ, ಸಿದ್ದಪ್ಪ ಸಕ್ರಿ, ಮುರಗೇಶ ಸಕ್ರಿ, ಸಂತೋಷ ಬಡಿಗೇರ, ಗೌಡಪ್ಪ ಅನಂತಪೂರ, ಅಪ್ಪು ಮೆಣಸಂಗಿ, ದಾನಪ್ಪ ಕರ್ಣಿ, ಗೀರೀಶ ಸಕ್ರಿ ಅವರನ್ನು ಸತ್ಕರಿಸಲಾಯಿತು
ತೆಲಸಂಗದಲ್ಲಿ ಶ್ರೀಶೈಲಂ ದಾಸೋಹ ಸೇವಾ ಸಮಿತಿಯ ಚನ್ನಪ್ಪ ದಶಮಾ, ಸಿದ್ದಪ್ಪ ಸಕ್ರಿ, ಮುರಗೇಶ ಸಕ್ರಿ, ಸಂತೋಷ ಬಡಿಗೇರ, ಗೌಡಪ್ಪ ಅನಂತಪೂರ, ಅಪ್ಪು ಮೆಣಸಂಗಿ, ದಾನಪ್ಪ ಕರ್ಣಿ, ಗೀರೀಶ ಸಕ್ರಿ ಅವರನ್ನು ಸತ್ಕರಿಸಲಾಯಿತು   

ತೆಲಸಂಗ: ‘ಜೀವನದುದ್ದಕ್ಕೂ ದಾನ ಮಾಡುವ ಮೂಲಕವೇ ಶ್ರೇಷ್ಠತೆ ಕಂಡವರು ನಮಗೆ ಮಾದರಿ ಆಗಬೇಕು. ಹಂಚಿಕೊಂಡು ತಿನ್ನುವವರ ಜೀವನ ನೆಮ್ಮದಿಯಿಂದ ಕೂಡಿರುತ್ತದೆ ಎನ್ನುವುದನ್ನು ನೆನಪಿಡಬೇಕು’ ಎಂದು ಡಾ.ಎಸ್.ಐ. ಇಂಚಗೇರಿ ಹೇಳಿದರು.

ಗ್ರಾಮದಲ್ಲಿಶುಕ್ರವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಶೈಲಂ ದಾಸೋಹ ಸೇವಾ ಸಮಿತಿಯ ಚನ್ನಪ್ಪ ದಶಮಾ, ಸಿದ್ದಪ್ಪ ಸಕ್ರಿ, ಮುರಗೇಶ ಸಕ್ರಿ, ಸಂತೋಷ ಬಡಿಗೇರ, ಗೌಡಪ್ಪ ಅನಂತಪೂರ, ಅಪ್ಪು ಮೆಣಸಂಗಿ, ದಾನಪ್ಪ ಕರ್ಣಿ, ಗೀರೀಶ ಸಕ್ರಿ ಅವರನ್ನು ಸತ್ಕರಿಸಿದರು.

ADVERTISEMENT

‘ಜೀವನ ಕೇವಲ ಪಡೆಯುವುದಕ್ಕಲ್ಲ. ಪಡೆದಿದ್ದನ್ನು ಸದ್ವಿನಿಯೋಗ ಮಾಡುವುದಕ್ಕಾಗಿಯೂ ಇದೆ ಎನ್ನುವ ಸತ್ಯವನ್ನು ಎಲ್ಲರೂ ತಿಳಿದು ನಡೆಯಬೇಕು’ ಎಂದರು.

ನಿವೃತ್ತ ಸೈನಿಕರಾದ ಬಸವರಾಜ ರೊಟ್ಟಿ, ಅಮಸಿದ್ದ ಟೋಪಣಗೋಳ, ಶಿವಯೋಗಿ ಹತ್ತಿ, ಮಲ್ಲಪ್ಪ ವಮನಸ್, ಬಸು ಗಂಗಾಧರ, ಪಂಡೀತ ಗೊರವ, ಪ್ರಭು ಕುಂಬಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.