ADVERTISEMENT

ಪೂಜಾರಿ ಸಹೋದರಿಯರಿಗೆ ಸತ್ಕಾರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 12:07 IST
Last Updated 16 ಸೆಪ್ಟೆಂಬರ್ 2020, 12:07 IST
ಐಗಳಿಯ ಡಾ.ಪಾಟೀಲ ಸಹೋದರರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಪೂಜಾರಿ ಸಹೋದರಿಯರನ್ನು ಸತ್ಕರಿಸಲಾಯಿತು
ಐಗಳಿಯ ಡಾ.ಪಾಟೀಲ ಸಹೋದರರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಪೂಜಾರಿ ಸಹೋದರಿಯರನ್ನು ಸತ್ಕರಿಸಲಾಯಿತು   

ಐಗಳಿ: ‘ಬಡತನವಿದ್ದರೂ ಶೈಕ್ಷಣಿಕವಾಗಿ ಸಾಧನೆ ಮಾಡಬಹುದು ಎನ್ನುವುದಕ್ಕೆ ಪೂಜಾರಿ ಸಹೋದರಿಯರು ಸಾಕ್ಷಿಯಾಗಿದ್ದಾರೆ’ ಎಂದು ಜಿಲ್ಲಾ ಆಯುಷ್ ನಿವೃತ್ತ ಅಧಿಕಾರಿ ಡಾ.ಬಸಗೌಡ ಪಾಟೀಲ ಹೇಳಿದರು.

ಇಲ್ಲಿ ಡಾ.ಪಾಟೀಲ ಸಹೋದರರು ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅರಟಾಳ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ಆದರ್ಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕವಿತಾ ಪೂಜಾರಿ (587) ಮತ್ತು ಸಹೋದರಿ ದ್ವಿತೀಯ ಪಿಯುಸಿಯಲ್ಲಿ 560 ಅಂಕ ಪಡೆದ ಶಿಲ್ಪಾ ಪೂಜಾರಿ ಅವರನ್ನು ಸತ್ಕರಿಸಿ ಮಾತನಾಡಿದರು.

‘ಕಲಿಯುವ ಸಮಯದಲ್ಲಿ ಮಕ್ಕಳಿಗೆ ದ್ವಿಚಕ್ರವಾಹನ, ಮೊಬೈಲ್‌, ಹಣವನ್ನು ಪೋಷಕರು ಕೊಡಬಾರದು. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಗುಣಮಟ್ಟದ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಡಾ.ಗೀತಾ ಪಾಟೀಲ ಹಾಗೂ ಉಪನ್ಯಾಸಕಿ ಭಾಗೀರಥಿ ಪಾಟೀಲ ಮಾತನಾಡಿದರು. ಭಾಗೀರಥಿ ಕಾಡಗೊಂಡ, ಸಾವಿತ್ರಿ ಟೋಪಗಿ, ಸುಶೀಲಾ ರುದ್ರಗೌಡರ, ಅನಸೂಯಾ ಪಾಟೀಲ, ಭಾರತಿ ಪಾಟೀಲ, ಸುಮಂಗಲಾ ಪಾಟೀಲ, ಮಹಾನಂದಾ ಪಾಟೀಲ, ಶ್ರೀದೇವಿ ಪಾಟೀಲ, ಮಹಾದೇವಿ ಪಾಟೀಲ, ಕಮಲಾ ದಾಶ್ಯಾಳ, ಕವಿತಾ ಪಾಟೀಲ, ಸುಲೋಚನಾ ಪಾಟೀಲ, ಸುವರ್ಣಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.