ADVERTISEMENT

ಐಗಳಿ: ಗುರುವಂದನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 11:33 IST
Last Updated 17 ಸೆಪ್ಟೆಂಬರ್ 2020, 11:33 IST
ಐಗಳಿಯಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯಿತು
ಐಗಳಿಯಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯಿತು   

ಐಗಳಿ: ‘ಶಿಕ್ಷಕರ ದಿನವನ್ನು ಇಲ್ಲಿನ ಶಿಷ್ಯರು ಹಾಗೂ ಸಾರ್ವಜನಿಕರು ಸೇರಿ ಆಚರಿಸಿರುವುದು ಸ್ವಾಗತಾರ್ಹ’ ಎಂದು ನಿವತ್ತ ಡಿಡಿಪಿಐ ಬಿ.ಆರ್. ಗಂಗಪ್ಪನವರ ಹೇಳಿದರು.

ಗ್ರಾಮದಲ್ಲಿ ಪಾಟೀಲ ಸಹೋದರರು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗುರು–ಶಿಷ್ಯರ ಪರಂಪರೆ ಅತ್ಯಂತ ಶ್ರೇಷ್ಠವಾದುದು. ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ’ ಎಂದರು.

ADVERTISEMENT

ನಿವೃತ್ತ ಮುಖ್ಯಶಿಕ್ಷಕ ಎ.ಎಸ್. ನಾಯಿಕ ಹಾಗೂ ನಿವೃತ್ತ ಶಿಕ್ಷಕರಾದ ಕೆ.ಆರ್.ಉಮರಾಣಿ ಮತ್ತು ಸುರೇಶ ಕುಲಕರ್ಣಿ ಅವರನ್ನು ಪಾಟೀಲ ಸಹೋದರರು ಸತ್ಕರಿಸಿದರು.

ಆಯುಷ್ ನಿವೃತ್ತ ಅಧಿಕಾರಿ ಡಾ.ಬಸಗೌಡ ಪಾಟೀಲ ಮಾತನಾಡಿದರು. ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಸಿ.ಎಚ್. ಪಾಟೀಲ, ಭಾರತ ಬ್ಯಾಂಕ್‌ ಅಧ್ಯಕ್ಷ ನೂರ್‌ಅಹ್ಮದ್‌ ಡೊಂಗರಗಾಂವ, ಹಿರಿಯರಾದ ಆರ್.ಆರ್. ತೆಲಸಂಗ, ಚನ್ನಪ್ಪ ಹಾಲಳ್ಳಿ, ಮುರುಘೇಂದ್ರ ಬ್ಯಾಂಕ್‌ ನಿರ್ದೇಶಕ ರುದ್ರಯ್ಯ ಹಿರೇಮಠ, ಎಂಜಿನಿಯರ್‌ ಆರ್. ಟೋಪಗಿ, ಜಗದೀಶ ಕೋರಬು, ಮುಖ್ಯ ಶಿಕ್ಷಕರಾದ ಎಸ್.ಎಂ. ಜನಗೌಡರ, ಎಸ್.ಸಿ. ಹಡಪದ, ಸಿದಗೌಡ ಪಾಟೀಲ ಇದ್ದರು.

ಕೇದಾರಿ ಬಿರಾದಾರ ಸ್ವಾಗತಿಸಿದರು.ಶಿಕ್ಷಕ ನಿಂಗನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಮಲಗೌಡ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.