ADVERTISEMENT

ಕಾರ್ಮಿಕ ಇಲಾಖೆಯಿಂದ ದಿನಸಿ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 14:28 IST
Last Updated 17 ಜುಲೈ 2020, 14:28 IST
ಅಥಣಿಯಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡಲಾದ ದಿನಸಿ ಕಿಟ್‌ಗಳನ್ನು ಶಾಸಕ ಮಹೇಶ ಕುಮಠಳ್ಳಿ ಶುಕ್ರವಾರ ವಿತರಿಸಿದರು
ಅಥಣಿಯಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡಲಾದ ದಿನಸಿ ಕಿಟ್‌ಗಳನ್ನು ಶಾಸಕ ಮಹೇಶ ಕುಮಠಳ್ಳಿ ಶುಕ್ರವಾರ ವಿತರಿಸಿದರು   

ಅಥಣಿ: ಕೋವಿಡ್–19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾದ ದಿನಸಿ ಕಿಟ್‌ಗಳನ್ನು ಶಾಸಕ ಮಹೇಶ ಕುಮಠಳ್ಳಿ ಶುಕ್ರವಾರ ವಿತರಿಸಿದರು.

ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 500 ಕಾರ್ಮಿಕರಿಗೆ ಸೌಲಭ್ಯ ನೀಡಲಾಯಿತು. 5 ಕೆ.ಜಿ. ಅಕ್ಕಿ, ತಲಾ ಒಂದು ಕೆ.ಜಿ. ಸಕ್ಕರೆ, ಬೇಳೆ, ಎಣ್ಣೆ ಸೇರಿದಂತೆ ಕೆಲವು ಸಾಂಬಾರು ಪದಾರ್ಥಗಳನ್ನು ಕೊಡಲಾಯಿತು.

‘ಕೊರೊನಾ ಸಂದರ್ಭದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಘ–ಸಂಸ್ಥೆಗಳು ಬಡ ಕುಟುಂಬಗಳಿಗೆ ನೆರವಾಗುತ್ತಿವೆ. ಸರ್ಕಾರ ಜನರ ನೆರವಿಗೆ ಧಾವಿಸಿದೆ. ಯಾವುದೇ ಭಯ ಬೇಡ’ ಎಂದು ಕುಮಠಳ್ಳಿ ಹೇಳಿದರು.

ADVERTISEMENT

‘ಕೊರೊನಾ ಮೇಲೆರಗು ಎತ್ತಿದ್ದಂತೆ. ಎತ್ತಿನ ಮೈಸವರಿದರೆ ಸಮಾಧಾನಗೊಳ್ಳುತ್ತದೆ. ಅಂತೆಯೇ ಕೊರೊನಾ ಬಗ್ಗೆಯೂ ಎಚ್ಚರವಾಗಿರಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮೊದಲಾದ ಮುಂಜಾಗ್ರತಾ ಕ್ರಮಗಳಿಂದ ಈ ಸೋಂಕಿನಿಂದ ದೂರವಿರಬಹುದು. ಈ ರೋಗಕ್ಕೆ ಆದಷ್ಟು ಬೇಗನೆ ಔಷಧ ಸಿಗಲೆಂದು ಶಿವಯೋಗಿಗಳಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.

ಪಿಎಸ್‌ಐ ಕುಮಾರ ಹಾಡಕಾರ, ಅಥಣಿ ಕಾರ್ಮಿಕ ನಿರೀಕ್ಷಕ ಜಿ.ಬಿ. ಧೂಪದಾಳ, ಕೆಎಫ್‌ಸಿಯ ಎನ್.ಎನ್. ಗಾಣಿಗೇರ, ಶಶಿಕಾಂತ ಸಾಳವೆ, ವಿನಯ ಪಾಟೀಲ, ಅನಿಲ ಸೌದಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.