
ಖಾನಾಪುರ: 'ತಾಲ್ಲೂಕಿನ ಗಂದಿಗವಾಡ ಗ್ರಾಮದಲ್ಲಿ 2024ರ ಜ.6ರಂದು ತಾಲ್ಲೂಕು ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮೀಪದ ನಡೆಸಲು ನಿರ್ಧರಿಸಲಾಗಿದೆ' ಎಂದು ಕನ್ನಡಪರ ಹೋರಾಟಗಾರ ರೇವಣಸಿದ್ಧಯ್ಯ ಹಿರೇಮಠ ಹೇಳಿದರು.
ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಗಂದಿಗವಾಡದ ಸಾಹಿತಿ ಮೃತ್ಯುಂಜಯಸ್ವಾಮಿ ಹಿರೇಮಠ ಅವರನ್ನು ಗಂದಿಗವಾಡದ ಅವರ ನಿವಾಸದಲ್ಲಿ ಸತ್ಕರಿಸಿ ಸಮ್ಮೇಳನಕ್ಕೆ ಆಹ್ವಾನ ನೀಡಿ ಅವರು ಮಾತನಾಡಿದರು.
‘ಸಮ್ಮೇಳನದಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ’ ಎಂದರು.
ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ವಿ.ವಿ ಬಡಿಗೇರ ಮಾತನಾಡಿ, 'ಕನ್ನಡ ಸಾಹಿತ್ಯ, ರಂಗಭೂಮಿ, ಸಂಗೀತ, ಧಾರ್ಮಿಕ, ಆಧ್ಯಾತ್ಮಿಕ, ಶಿಕ್ಷಣ, ಪ್ರವಚನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಂಚೂಣಿಯಲ್ಲಿದ್ದು ಕನ್ನಡ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಹಾಗೂ ಬಸವ ತತ್ವ ಪರಿಪಾಲಕ ಮೃತ್ಯುಂಜಯಸ್ವಾಮಿ ಹಿರೇಮಠ ಅವರನ್ನು ಅಧ್ಯಕ್ಷರಾಗಿ ಆಯ್ಕೆಮಾಡಲಾಗಿದೆ' ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಸವಪ್ರಭು ಹಿರೇಮಠ, ಪ್ರಭುದೇವ ಹಿರೇಮಠ, ಗಂದಿಗವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇಸಾಯಿ ಗಾಳಿ, ಮಹಾಂತೇಶ ಕಮತಗಿ, ಈರಯ್ಯಾ ಹಿರೇಮಠ, ಮಂಜುನಾಥ ಶೆಟ್ಟೆಣ್ಣವರ, ನಿಂಗಪ್ಪ ಮಂಡಿ, ಪ್ರಕಾಶ ಹಿರೇಮಠ, ವಿಜಯ ಯಕಾಜನವರ, ಬಸವರಾಜ ಯಡಾಲ, ವೀರಭದ್ರ ಜವಳಿ, ಬಸವರಾಜ ಭಂಗಿ, ಆನಂದ ಶೆಟ್ಟಣ್ಣವರ, ರಾಮಲಿಂಗ ಕುರೇರ, ಭೂಶಪ್ಪ ಶೆಟೆಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.