ಗೋಕಾಕ ಮತ್ತು ಶಿಂಗಳಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್-ಕಮ್-ಬ್ಯಾರೇಜ್ ಮುಳುಗಿದೆ
ಗೋಕಾಕ: ಘಟಪ್ರಭಾ ಹಾಗೂ ಮಾರ್ಕಂಡೇಯ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಘಟಪ್ರಭೆಗೆ ಒಳಹರಿವು ಹೆಚ್ಚಾಗಿದೆ. ಪ್ರವಾಹ ಭೀತಿ ಎದುರಾಗಿದೆ.
ಘಟಪ್ರಭಾ ನದಿಯಲ್ಲಿ ಸೋಮವಾರ ಸಂಜೆ ಇದ್ದ 35 ಸಾವಿರ ಕ್ಯೂಸೆಕ್ ಒಳಹರಿವು ಪ್ರಮಾಣವು, ಮಂಗಳವಾರ ಬೆಳಗಾಗುವುದರಲ್ಲಿ 45 ಸಾವಿರ ಕ್ಯೂಸೆಕ್ ದಾಡಿದೆ. ದನಕರುಗಳ ಸಮೇತ ಜನರು ಸುರಕ್ಷಿತ ಸ್ಥಳಗಳತ್ತ ತೆರಳಬೇಕೆಂದು ತಹಶೀಲ್ದಾರ್ ಡಾ. ಮೋಹನ ಭಸ್ಮೆ ಮುನ್ನೆಚ್ಚರಿಕೆ ನೀಡಿದ್ದಾರೆ.
ಮಳೆ ಇದೇ ರೀತಿ ಮುಂದುವರೆದರೆ ಮಾರ್ಕಂಡೇಯ ನದಿಗಿರುವ ಚಿಕ್ಕೋಳಿ ಸೇತುವೆ ಘಟಪ್ರಭೆಯ ಲೋಳಸೂರ ಸೇತುವೆ ಮುಳುಗುವ ಸಾಧ್ಯತೆಗಳು ಅಧಿಕವಾಗಿವೆ. ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರವಾಹ ಸ್ಥಿತಿಗತಿ ಎದುರಿಸಲು ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.