ADVERTISEMENT

ಗೋಕಾಕ | ಗೋಡೆ ಕುಸಿದು ಮಗು ಸಾವು; ಇನ್ನೊಂದು ಮಗುವಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 26 ಮೇ 2025, 6:59 IST
Last Updated 26 ಮೇ 2025, 6:59 IST
<div class="paragraphs"><p>ಕೃತಿಕಾ ನಾಗೇಶ್ ಪೂಜಾರಿ</p></div>

ಕೃತಿಕಾ ನಾಗೇಶ್ ಪೂಜಾರಿ

   

ಗೋಕಾಕ (ಬೆಳಗಾವಿ ಜಿಲ್ಲೆ): ಇಲ್ಲಿನ ಮಹಾಲಿಂಗೇಶ್ವರ ಕಾಲೊನಿಯಲ್ಲಿ ಸೋಮವಾರ ನಸುಕಿನಲ್ಲಿ ಮನೆ‌ ಗೋಡೆ ಕುಸಿದು ಹೆಣ್ಣು ಮಗು ಸ್ಥಳದಲ್ಲೇ‌ ಮೃತಪಟ್ಟಿದೆ. ಇನ್ನೊಂದು ಮಗು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೃತಿಕಾ ನಾಗೇಶ್ ಪೂಜಾರಿ(3.9 ವರ್ಷ) ಮೃತಪಟ್ಟ ಮಗು. ಈ ಮಗುವಿನ ಪಕ್ಕದಲ್ಲೇ ಮಲಗಿದ್ದ, ಇವರ ಐದು ವರ್ಷದ ಅಕ್ಕ ‌ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ADVERTISEMENT

ಭಾನುವಾರ ರಾತ್ರಿಯಿಡೀ‌ ಜಿಟಿಜಿಟಿ ಮಳೆ‌ ಸುರಿಯಿತು. ಇದರಿಂದ ಮನೆಯ ಹಿಂಬದಿಯ ಮಣ್ಣಿನ ಗೋಡೆ ಕುಸಿಯಿತು. ಗೋಡೆಗೆ ಹೊಂದಿಕೊಂಡೇ ಮಲಗಿದ್ದ ಮಗು ಕಲ್ಲು- ಮಣ್ಣಿನಲ್ಲಿ ಸಿಕ್ಕು ಸಾವನ್ನಪ್ಪಿತು. ಎಚ್ಚರಗೊಂಡ ತಂದೆ- ತಾಯಿ ಇನ್ನೊಂದು ಮಗುವನ್ನು ಅವಶೇಷಗಳಿಂದ‌ ತೆಗದು‌ ರಕ್ಷಿಸಿದರು. ಬದುಕುಳಿದ ಮಗುವನ್ನು ಗೋಕಾಕ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಕಾಕ ಶಹರ ಠಾಣೆ ಪೊಲೀಸರು, ನಗರಸಭೆ ಅಧಿಕಾರಿಗಳು, ತಹಶಿಲ್ದಾರರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.