ಅಥಣಿ: ‘ರಾಷ್ಟ್ರ ಸೇವಿಕಾ ಸಮಿತಿ ಸ್ತ್ರೀಯರಿಗಾಗಿ ಇರುವ ಸಂಘಟನೆ. ಭಾರತದ ಸಾಂಸ್ಕೃತಿ ಪರಂಪರೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಆಗಬೇಕು. ಸ್ತ್ರೀಯರು ಗಟ್ಟಿಯಾಗಿ ನಿಂತು ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಪಡುವ ಸಂಗತಿ’ ಎಂದು ಅಥಣಿ ತಾಲ್ಲೂಕು ರಾಷ್ಟ್ರ ಸೇವಿಕಾ ಸಹ ಸಂಯೋಜಕಿ ಮಂಜುಶಾ ನಾಯಿಕ ಹೇಳಿದರು.
ಸಮೀಪದ ಸತ್ತಿ ಗ್ರಾಮದಲ್ಲಿ ಈಚೆಗೆ ರಾಷ್ಟ್ರ ಸೇವಿಕಾ ಸಮಿತಿ ಸತ್ತಿ ಶಾಖೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತೀಯರ ಸಂಸ್ಕೃತಿ ಶ್ರೀಮಂತವಾಗಿ ಉಳಿಯಲು ಮಹಿಳೆಯರೇ ಕಾರಣರಾಗಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಹೆಣ್ಣು ಮಕ್ಕಳನ್ನು ಬಾಲ್ಯದಲ್ಲಿಯೇ ಸೇರಿಸಬೇಕು. ಅವರು ಸದೃಢರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಸ್ವಯಂ ರಕ್ಷಣೆಗೆ ಬೇಕಾದ ಎಲ್ಲ ತರಬೇತಿಗಳನ್ನು ಹೆಣ್ಣು ಮಕ್ಕಳಿಗೆ ನೀಡುವುದು ಅವಶ್ಯವಾಗಿದೆ’ ಎಂದರು.
ಶೇಗುಣಸಿ ಗ್ರಾಮದ ಸುಧಾರಾಣಿ ಕಾಡಗೌಡ ಪಾಟೀಲ ಮಾತನಾಡಿದರು. ಸಂಘದ ಪ್ರಾಂತ ಪ್ರಮುಖೆ ವಾಣಿ ರಮೇಶ, ಸತ್ತಿ ಶಾಖೆಯ ಮುಖ್ಯಸ್ಥೆ ಶ್ರುತಿ ಕುಲಕರ್ಣಿ, ಅಥಣಿ ತಾಲ್ಲೂಕು ಶಾರೀರಿಕ ಪ್ರಮುಖೆ ದಾನಮ್ಮ ಗುಡ್ಡಾಪುರ, ಅಶ್ವಿನಿ ಪಾಟೀಲ, ರುಚಿತಾ ಹಿಡಕಲ, ಶಿಲ್ಪಾ ಮಡಿವಾಳರ, ನೀತಾ ಕುಲಕರ್ಣಿ, ಅನ್ನಪೂರ್ಣ ರುದ್ರಗೌಡರ, ರಾಧಾ ಖನಗೌಡರ, ಸತ್ತಿ ಶಾಖೆಯ ಆರ್.ಎಸ್ .ಎಸ್. ಪ್ರಮುಖ ರಾಜೇಂದ್ರ ಕುಲಕರ್ಣಿ, ಮಾಜಿ ಶಾಸಕ ಮಹೇಶ ಕುಮಠಳ್ಳಿ ಇದ್ದರು. ಮಹಿಳೆಯರು ಹೆಣ್ಣು ಮಕ್ಕಳು ಸೇರಿದಂತೆ 150 ಕ್ಕಿಂತಲೂ ಹೆಚ್ಚು ಜನರು ಪಥಸಂಚಲನದಲ್ಲಿ ಭಾಗವಹಿಸಿಗದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.