ಮಾರ್ಕಂಡೇಯ ನದಿಗೆ ಕಟ್ಟಿದ ಗೋಕಾಕ– ಚಿಕ್ಕೋಳಿ ಸೇತುವೆ ಮುಳುಗುವ ಹಂತ ತಲುಪಿದೆ
ಗೋಕಾಕ (ಬೆಳಗಾವಿ ಜಿಲ್ಲೆ): ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಮುಂದುವರಿದ ಕಾರಣ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ಉಕ್ಕಿ ಹರಿಯುತ್ತಿವೆ. ಗೋಗಾಕ ನಗರದ ಹೊರವಲಯದ ಗೋಕಾಕ– ಶಿಂಗಳಾಪುರ ಸೇತುವೆ ಮಂಗಳವಾರ ನಸುಕಿನಲ್ಲಿ ಸಂಪೂರ್ಣ ನದಿ ನೀರಿನಲ್ಲಿ ಮುಳುಗಡೆಯಾಗಿದೆ.
ಸೋಮವಾರ ರಾತ್ರಿಯವರೆಗೂ ಈ ಸೇತುವೆ ಸಂಚಾರಕ್ಕೆ ಮುಕ್ತವಾಗಿತ್ತು. ನದಿಗಳ ಪ್ರದೇಶದಲ್ಲಿ ರಾತ್ರಿ ಹೆಚ್ಚು ಮಳೆಯಾದ ಕಾರಣ ಕೆಲವೇ ಗಂಟೆಗಳಲ್ಲಿ ನೀರು ಸೇತುವೆ ಮೇಲೆ ಹರಿದಿದೆ. ಅಲ್ಲದೇ, ಅಕ್ಕಪಕ್ಕದ ನೂರಾರು ಎಕರೆ ಜಮೀನುಗಳಿಗೂ ನುಗ್ಗಿದೆ.
ಇದರಿಂದ ಶಿಂಗಳಾಪುರ ಗ್ರಾಮದ ಗೋಕಾಕ ಜತೆಗೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ, ಗೋಕಾಕ ಹೊರವಲಯದ ಚಿಕ್ಕೋಳಿ ಸೇತುವೆ ಕೂಡ ಮುಳುಗುವ ಹಂತದಲ್ಲಿದೆ. ಇನ್ನೆರಡು ಅಡಿಯಷ್ಟು ಮಾತ್ರ ಬಾಕಿ ಇದೆ. ಈ ಸೇತುವೆ ಮುಳುಗಿದರೆ ನೀರು ಗೋಕಾಕ ನಗರದ ಕೆಲವು ಪ್ರದೇಶಗಳಿಗೆ ನುಗ್ಗುತ್ತದೆ.
ನದಿ ತೀರದ ಜನ ಮುಂಜಾಗೃತೆ ವಹಿಸುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.