ಸಾಂಬ್ರಾ: ಬೆಳಗಾವಿ ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ನೂತನ ‘ಗ್ರಾಮ ಒನ್’ ನಾಗರಿಕ ಸೇವಾ ಕೇಂದ್ರವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಗಳವಾರ ಉದ್ಘಾಟಿಸಿದರು.
ಈ ಸೇವಾ ಕೇಂದ್ರದ ಮೂಲಕ ಸಾರ್ವಜನಿಕರು ಹತ್ತಾರು ರೀತಿಯ ಸೇವೆಗಳನ್ನು ಪಡೆಯಬಹುದು. ವಿವಿಧ ಬಗೆಯ ಪ್ರಮಾಣ ಪತ್ರಗಳು, ಬಸ್, ರೈಲ್ವೆ ಹಾಗೂ ವಿಮಾನದ ಟಿಕೆಟ್‌ಗಳನ್ನು ಪಡೆಯಬಹುದು. ಎಲ್ಲ ತರಹದ ಆನ್ ಲೈನ್ ಅರ್ಜಿಗಳನ್ನು ಭರ್ತಿ ಮಾಡಬಹುದು. ಇದರಿಂದಾಗಿ ಜನರ ಶ್ರಮ, ಸಮಯ ಉಳಿತಾಯವಾಗಲಿದೆ. ಇದನ್ನು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.
ಗ್ರಾಮದ ಹಿರಿಯರಾದ ಶಿವಕುಮಾರ ಬ್ಯಾಹಟ್ಟಿ, ರೂಪಾ ಬ್ಯಾಹಟ್ಟಿ, ಬಸಲಿಂಗಪ್ಪ ಅಕ್ಕತಂಗೇರಹಾಳ, ಗಂಗಾಧರ ತಿಮ್ಮಾಪೂರಮಠ ಮುಂತಾದವರು ಇದ್ದರು.
ಅರಿಸಿನ ಕುಂಕುಮ: ‘ಚುನಾವಣೆಗೆ ಪೂರ್ವದಲ್ಲಿ ಕ್ಷೇತ್ರದ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ. ನಾಲ್ಕೂವರೆ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ನಡೆದಿದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಬೆಳಗಾವಿ ತಾಲ್ಲೂಕಿನ ಮಾರಿಹಾಳ ಗ್ರಾಮದಲ್ಲಿ ಅರಿಸಿನ– ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಗ್ರಾಮೀಣ ಕ್ಷೇತ್ರದ ಜನರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ದಾಖಲೆ ಮಟ್ಟದ ಅನುದಾನ ತಂದಿದ್ದೇನೆ’ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬಸವರಾಜ ಹಿತ್ತಲಮನಿ, ರಾಮಚಂದ್ರ ಚೌಹಾಣ, ಅಪ್ಪಾಸಾಬ್ ಬಾಗವಾನ, ನಾರಾಯಣ ಸೊಗಲಿ, ಕಲ್ಲಪ್ಪ ಸೀತಿಮನಿ, ಬಸವರಾಜ ಮ್ಯಾಗೋಟಿ, ಪ್ರಕಾಶ ಯಲ್ಲಪ್ಪನವರ, ಅನಂತ ಸಾಳುಂಕೆ, ಮಂಜುನಾಥ ಹೊನ್ನಪ್ಪನವರ, ಚಿನ್ಮಯ ಯಲ್ಲಪ್ಪನವರ, ವಿಠ್ಠಲ ಮಲ್ಲಾರಿ, ಗೌಡಪ್ಪ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.