
ಪ್ರಜಾವಾಣಿ ವಾರ್ತೆ
ಮೂಡಲಗಿ: ಇಲ್ಲಿಯ ಜ್ಞಾನಯೋಗಿ ಆಧ್ಯಾತ್ಮಿಕ ಕೇಂದ್ರದಲ್ಲಿ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಗಳ ತೃತೀಯ ಪುಣ್ಯಸ್ಮರಣೆ ನಿಮತ್ಯವಾಗಿ ಜ. 2ರಂದು ಬೆಳಿಗ್ಗೆ 10ಕ್ಕೆ ಗುರುವಂದನೆ ಕಾರ್ಯಕ್ರಮ ನಡೆಯಲಿದೆ.
ಮುನ್ಯಾಳ–ರಂಗಾಪುರದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಾರೂಗೇರಿಯ ಶರಣ ವಿಚಾರ ವೇದಿಕೆಯ ಅಧ್ಯಕ್ಷ ಐ.ಆರ್. ಮಠಪತಿ ಅನುಭಾವ ನುಡಿ ಹೇಳುವರು. ಗೌರವ ಉಪಸ್ಥಿತಿ ವಕೀಲ ಶಿವಶಂಕರ ಬೋಳಜಾಡರ ಭಾಗವಹಿಸುವರು ಎಂದು ಶಿವಪುತ್ರಯ್ಯ ಮಠಪತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.