ADVERTISEMENT

ಬೆಳಗಾವಿ: ‘ಸದೃಢ ಸಮಾಜಕ್ಕಾಗಿ ಆರೋಗ್ಯ ಅಗತ್ಯ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 8:23 IST
Last Updated 23 ಜನವರಿ 2022, 8:23 IST
ಬೆಳಗಾವಿ ತಾಲ್ಲೂಕಿನ ಕಡೋಲಿಯಲ್ಲಿ ಸತೀಶ ಜಾರಕಿಹೊಳಿ ಪ್ರತಿಷ್ಠನದಿಂದ ಭಾನುವಾರ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಮುಖಂಡ ರಾಹುಲ ಜಾರಕಿಹೊಳಿ ವೀಕ್ಷಿಸಿದರು
ಬೆಳಗಾವಿ ತಾಲ್ಲೂಕಿನ ಕಡೋಲಿಯಲ್ಲಿ ಸತೀಶ ಜಾರಕಿಹೊಳಿ ಪ್ರತಿಷ್ಠನದಿಂದ ಭಾನುವಾರ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಮುಖಂಡ ರಾಹುಲ ಜಾರಕಿಹೊಳಿ ವೀಕ್ಷಿಸಿದರು   

ಬೆಳಗಾವಿ: ‘ಸದೃಢ ಸಮಾಜಕ್ಕಾಗಿ ಆರೋಗ್ಯ ಅಗತ್ಯ. ಇದಕ್ಕಾಗಿ ನಿಯಮಿತವಾಗಿ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಮುಖಂಡ, ಸತೀಶ ಶುಗರ್ಸ್‌ ನಿರ್ದೇಶಕ ರಾಹುಲ ಜಾರಕಿಹೊಳಿ ತಿಳಿಸಿದರು.

ಸತೀಶ ಜಾರಕಿಹೊಳಿ ಪ್ರತಿಷ್ಠನದಿಂದ ತಾಲ್ಲೂಕಿನ ಕಡೋಲಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

‘ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಶಿಬಿರ ಆಯೋಜಿಸಲಾಗಿದೆ. ಸೋಂಕು ಹರಡುವಿಕೆ ಹಾಗೂ ಕೋವಿಡ್‌ ಮೂರನೇ ಅಲೆ ಹಿನ್ನೆಲೆಯಲ್ಲಿ ಜನರ ಆರೋಗ್ಯ ಹಿತದೃಷ್ಟಿಯಿಂದ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಜನತೆಗೆ ಆರೋಗ್ಯ ಭಾಗ್ಯ ಕಲ್ಪಿಸುವ ಧ್ಯೇಯವನ್ನು ಶಿಬಿರದ ಮೂಲಕ ಹೊಂದಲಾಗಿದೆ. ರೋಗ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರೂ ಮುಂಜಾಗ್ರತೆ ವಹಿಸಬೇಕು’ ಎಂದರು.

ವೈದ್ಯರು ರೋಗ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಮಾರ್ಗದರ್ಶನ ಮಾಡಿದರು. ವಿದ್ಯಾರ್ಥಿಗಳು, ನೌಕರರು, ಮಕ್ಕಳು, ವೃದ್ಧರು ಪಾಲ್ಗೊಂಡಿದ್ದರು.

ಮುಖಂಡರಾದ ಅನು ಕಟಾಂಬಳೆ, ರಾಜು ಮಾಯಣ್ಣ, ಡಾ.ಸಂದೀಪ, ಅರುಣ ಕಟಾಂಬಳೆ, ಮಲ್ಲಗೌಡ ಪಾಟೀಲ, ಜ್ಯೋತಿಭಾ ಗುಟ್ಟೆನ್ನವರ, ನಿಖಿಲ ಸುಭಂಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.