ADVERTISEMENT

ಬೆಳಗಾವಿ: ಅರಿಹಂತ ಆಸ್ಪತ್ರೆ: ಆರೋಗ್ಯ ತಪಾಸಣೆ ನಾಳೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 2:48 IST
Last Updated 5 ಡಿಸೆಂಬರ್ 2025, 2:48 IST
   

ಬೆಳಗಾವಿ: ಇಲ್ಲಿನ ಅರಿಹಂತ ಆಸ್ಪತ್ರೆಯ ವತಿಯಿಂದ ಡಿ.6ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಬ್ಯಾರಿಯಾಟ್ರಿಕ್ ಮತ್ತು ಅತಿಸ್ಥೂಲತೆ ಶಿಬಿರ ಅಯೋಜಿಸಲಾಗಿದೆ.

ಡಾ.ಸುರೇಂದ್ರ ಉಗಾಳೆ ರೋಗಿಗಳ ಪರಿಶೀಲನೆ ಮತ್ತು ಸಲಹೆ ನೀಡಲಿದ್ದಾರೆ. ಅತಿಸ್ಥೂಲತೆ ಚಿಕಿತ್ಸೆಗಳು, ತೂಕ ಕಡಿಮೆ ಮಾಡುವ ವಿಧಾನಗಳು, ಬ್ಯಾಲೂನ್ ಥೆರಪಿ ಚಿಕಿತ್ಸೆಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಗ್ಯಾಸ್ಟ್ರಿಕ್ ಬ್ಯಾಲೂನ್ ಆಧಾರಿತ ವಿಧಾನದಿಂದ 16 ವಾರಗಳಲ್ಲಿ ರೋಗಿಗಳ ತೂಕ ಸರಾಸರಿ 10 ರಿಂದ 15 ಪ್ರತಿಶತದವರೆಗೆ ಕಡಿಮೆಯಾಗಬಹುದು. 12 ತಿಂಗಳ ಫಾಲೋಅಪ್ ನಂತರ 95 ಪ್ರತಿಶತದವರೆಗೆ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು. ಹೆಚ್ಚಿನ ಮಾಹಿತಿಗೆ 90361 02390 ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT