ADVERTISEMENT

ಹೃದಯಾಘಾತ: ತಮ್ಮ ಮೃತಪಟ್ಟ ಸುದ್ದಿ ಕೇಳಿ ಅಣ್ಣ ಸಾವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 17:59 IST
Last Updated 4 ಅಕ್ಟೋಬರ್ 2025, 17:59 IST
ಸತೀಶ ಬಾಗನ್ನವರ
ಸತೀಶ ಬಾಗನ್ನವರ   

ಗೋಕಾಕ (ಬೆಳಗಾವಿ): ತಾಲ್ಲೂಕಿನ ಕಪರಟ್ಟಿ ಗ್ರಾಮದಲ್ಲಿ ಶನಿವಾರ ಹೃದಯಾಘಾತದಿಂದ ತಮ್ಮ ಮೃತಪಟ್ಟ ಸುದ್ದಿ ಕೇಳಿ ಅಣ್ಣ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಕಪರಟ್ಟಿಯ ಸತೀಶ ಬಾಗನ್ನವರ (16) ನಸುಕಿನ 4ಕ್ಕೆ ಹೃದಯಾಘಾತವಾಗಿ ಕೊನೆಯುಸಿರೆಳೆದ. ಸುದ್ದಿ ತಿಳಿದು ಅಣ್ಣ ಬಸವರಾಜ (24) ಅವರಿಗೂ ಹೃದಯಾಘಾತದಿಂದ ಮೃತಪಟ್ಟರು ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಾವಿನ ಸುದ್ದಿ ಕೇಳಿ ಬಸವರಾಜ ಅವರ ಪತ್ನಿ, ಗರ್ಭಿಣಿ ಪವಿತ್ರಾ (20) ಕೂಡಾ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸತೀಶ 10ನೇ ತರಗತಿ ವಿದ್ಯಾರ್ತಿಯಾಗಿದ್ದು, ಬಸವರಾಜ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. 

ADVERTISEMENT
ಬಸವರಾಜ ಬಾಗನ್ನವರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.