ಉಗರಗೋಳ (ಬೆಳಗಾವಿ ಜಿಲ್ಲೆ): ಇಲ್ಲಿನ ಯಲ್ಲಮ್ಮನ ಗುಡ್ಡದ ಸುತ್ತ ಗುರುವಾರ ಸುರಿದ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ನೀರು ದೇವಸ್ಥಾನದ ಒಳಗೆ ನುಗ್ಗಿತು.
ಸಂಜೆ 4ರ ಸುಮಾರಿಗೆ ಏಕಾಏಕಿ ಆರಂಭವಾದ ಮಳೆ ಒಂದು ತಾಸು ನಿರಂತರ ಸುರಿಯಿತು. ಸುತ್ತಲಿನ ಗುಡ್ಡಗಳಿಂದ ಹರಿದುಬಂದ ನೀರು ಎಣ್ಣೆಹೊಂಡ ಸೇರಿತು. ಹೊಂಡ ತುಂಬಿದ ಬಳಿಕ ದೇವಸ್ಥಾನದ ಪ್ರಾಂಗಣಕ್ಕೂ ನುಗ್ಗಿತು.
ಇದರಿಂದ ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದರು. ದೇವಸ್ಥಾನದ ಸುತ್ತಲಿನ ಪೂಜಾ ಸಾಮಗ್ರಿಗಳ ಮಳಿಗೆಗಳಿಗೂ ಹಾನಿ ಸಂಭವಿಸಿತು.
ವಿಡಿಯೊ ನೋಡಲು ಈ ಲಿಂಕ್ ಒತ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.