ADVERTISEMENT

ಬೈಲಹೊಂಗಲದಲ್ಲಿ ಗುಡುಗು, ಮಿಂಚಿನ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 15:49 IST
Last Updated 26 ಮಾರ್ಚ್ 2025, 15:49 IST
ಬೈಲಹೊಂಗಲದಲ್ಲಿ ಬುಧವಾರ ಸುರಿದ ಮಳೆಗೆ ಎಂ.ಜೆ.ಹೌಸಿಂಗ್ ಕಾಲೂನಿ ಮುಖ್ಯ ರಸ್ತೆ ಕೆಸರಿನ ರೂಪ ಪಡೆದು ಸಂಚಾರಕ್ಕೆ ತೊಂದರೆ ಉಂಟಾಯಿತು.
ಬೈಲಹೊಂಗಲದಲ್ಲಿ ಬುಧವಾರ ಸುರಿದ ಮಳೆಗೆ ಎಂ.ಜೆ.ಹೌಸಿಂಗ್ ಕಾಲೂನಿ ಮುಖ್ಯ ರಸ್ತೆ ಕೆಸರಿನ ರೂಪ ಪಡೆದು ಸಂಚಾರಕ್ಕೆ ತೊಂದರೆ ಉಂಟಾಯಿತು.   

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಬಿರುಗಾಳಿಯೊಂದಿಗೆ ಬುಧವಾರ ಸಂಜೆ ಭಾರಿ ಮಳೆ ಆಯಿತು.

ಬಿಸಿಲಿನ ಧಗೆಗೆ ಬೇಸತ್ತಿದ್ದ ಜನತೆಗೆ ಮಳೆರಾಯ ದಿಢೀರನೇ ಧರೆಗಿಳಿದು ತಂಪೆರೆದ. ಜೋರು ಗಾಳಿ, ಗುಡುಗು, ಮಿಂಚಿನ ಮಳೆಗೆ ಅಲ್ಲಲ್ಲಿ ಗಿಡಮರಗಳು ಧರೆಗುರುಳಿ ಸಂಚಾರಕ್ಕೆ ತೊಂದರೆ ಉಂಟಾಯಿತು. ಹಳ್ಳ, ಗಟಾರಗಳು ತುಂಬಿ ಹರಿದವು. ತ್ಯಾಜ್ಯ ನೀರು ರಸ್ತೆ ಮೇಲೆ ಹರಿದು ಹಳ್ಳ ಸೇರಿತು. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಬೈಲವಾಡ, ಅಮಟೂರ, ನಯಾನಗರ, ಜಾಲಿಕೊಪ್ಪ, ಗರ್ಜೂರ, ಸಂಗೊಳ್ಳಿ, ಆನಿಗೋಳ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ವರ್ಷಧಾರೆ ಸುರಿಯಿತು.

ADVERTISEMENT

ಇಂಚಲ ಕ್ರಾಸ್ ನಲ್ಲಿ ಗಟಾರುಗಳು ತುಂಬಿ ಹರಿದಿದ್ದರಿಂದ ಬಸ್ ನಿಲ್ದಾಣ, ರಾಯಣ್ಣ ವೃತ್ತದ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ನೀರು ತುಂಬಿ ಹರಿಯಿತು. ಪುರಸಭೆ ಕೆಲ ವಾರ್ಡುಗಳ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಉಂಟಾಯಿತು. ಮನೆಗಳಿಗೆ ನುಗ್ಗಿದ ಮಳೆ ನೀರು ತಗೆದು ಹಾಕಲು ನಿವಾಸಿಗಳು ಪ್ರಾಯಾಸಪಟ್ಟರು. ಎಂ.ಜೆ.ಹೌಸಿಂಗ್ ಕಾಲೂನಿ ಮುಖ್ಯ ರಸ್ತೆ ಕೆಸರಿನ ರೂಪ ಪಡೆದು ಸಂಚಾರಕ್ಕೆ ತೀವ್ರ ಅಡಚಣೆ ಆಯಿತು. ಜೋರು ಮಳೆಗೆ ದ್ವಿಚಕ್ರ ವಾಹನ ಸವಾರರು ಗಿಡಮರಗಳ ಆಶ್ರಯ ಪಡೆದರು.

ಬೈಲಹೊಂಗಲದಲ್ಲಿ ಬುಧವಾರ ಸುರಿದ ಮಳೆಗೆ ಎಂ.ಜೆ.ಹೌಸಿಂಗ್ ಕಾಲೂನಿ ಮುಖ್ಯ ರಸ್ತೆ ಕೆಸರಿನ ರೂಪ ಪಡೆದು ಸಂಚಾರಕ್ಕೆ ತೊಂದರೆ ಉಂಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.