ADVERTISEMENT

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ: ಬೆಳಗಾವಿ ನದಿ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 12:56 IST
Last Updated 5 ಜುಲೈ 2022, 12:56 IST
ಒಂದೇ ದಿನದಲ್ಲಿ ಪಂಚಗಂಗಾ  ನದಿ ನೀರಿನ ಮಟ್ಟ 8 ಅಡಿ ಏರಿಕೆ
ಒಂದೇ ದಿನದಲ್ಲಿ ಪಂಚಗಂಗಾ  ನದಿ ನೀರಿನ ಮಟ್ಟ 8 ಅಡಿ ಏರಿಕೆ   

ಬೆಳಗಾವಿ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜಿಲ್ಲೆಯ ನದಿ ತೀರದ ಗ್ರಾಮಗಳ ಜನ ಎಚ್ಚರದಿಂದ ಇರುವುಂತೆ ಸೂಚಿಸಲಾಗಿದೆ.

ಕೊಲ್ಹಾಪುರ ಜಿಲ್ಲೆಯ ಪ್ರಮುಖ ನದಿ ಪಂಚಗಂಗಾ ನದಿಯಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಿದೆ. ಒಂದೇ ದಿನದಲ್ಲಿ ಪಂಚಗಂಗಾ ನದಿ ನೀರಿನ ಮಟ್ಟ 8 ಅಡಿ ಏರಿಕೆಯಾಗಿದ್ದು, 14 ಸೇತುವೆ ಮುಳುಗಡೆಯಾಗಿವೆ. ಸದ್ಯ ನದಿಯ ನೀರಿನ ಮಟ್ಟ 39 ಅಡಿ ಇದೆ. ನದಿಯ ಅಪಾಯಕಾರಿ ಮಟ್ಟ 43 ಅಡಿ ಇದೆ. ಹೆಚ್ಚುವರಿ ನೀರು ಹರಿದು ಜಿಲ್ಲೆಗೇ ಬರುವುದರಿಂದ ಜಿಲ್ಲಾಡಳಿತ ಪೂರ್ವಸಿದ್ಧತೆ ಮಾಡಿಕೊಂಡಿದೆ.

ಮಹಾರಾಷ್ಟ್ರದ ಮಳೆಯಿಂದಾಗಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿಯೂ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.