ADVERTISEMENT

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಕೃಷ್ಣಾ ನದಿಗೆ 1 ಲಕ್ಷ ಕ್ಯುಸೆಕ್‌ ಮೀರಿದ ಒಳಹರಿವು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 6:03 IST
Last Updated 6 ಆಗಸ್ಟ್ 2020, 6:03 IST
ಕೊಯ್ನಾ ಜಲಾಶಯ (ಸಂಗ್ರಹ ಚಿತ್ರ)
ಕೊಯ್ನಾ ಜಲಾಶಯ (ಸಂಗ್ರಹ ಚಿತ್ರ)   

ಬೆಳಗಾವಿ:ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಕೃಷ್ಣಾ ಹಾಗೂ ಉಪನದಿಗಳ ಒಳಹರಿವು ಹೆಚ್ಚಳವಾಗಿದೆ.

ಕೃಷ್ಣಾ ನದಿಯ ಉಗಮಸ್ಥಳವಾಗಿರುವ ಮಹಾಬಲೇಶ್ವರ ಘಟ್ಟಪ್ರದೇಶದಲ್ಲಿ 18.3 ಸೆಂ.ಮೀ ಹಾಗೂ ಜಲಾನಯನ ಪ್ರದೇಶವಾದ ಕೊಯ್ನಾ ಪ್ರದೇಶದಲ್ಲಿ 20.2 ಸೆಂ.ಮೀ, ದೂಧ್‌ಗಂಗಾ ನದಿಯ ಜಲಾನಯನ ಪ್ರದೇಶವಾದ ಕಾಳಮ್ಮವಾಡಿಯಲ್ಲಿ 25.5 ಸೆಂ.ಮೀ, ರಾಧಾ ನಗರಿಯಲ್ಲಿ 27.1 ಸೆಂ.ಮೀ ಹಾಗೂ ವೇದಗಂಗಾ ನದಿಯ ಜಲಾನಯನ ಪ್ರದೇಶವಾದ ಪಾಟಗಾಂವದಲ್ಲಿ 14.0 ಸೆಂ.ಮೀ ಮಳೆಯಾಗಿದೆ.

ಕೊಯ್ನಾ ಜಲಾಶಯವು ಶೇ 62ರಷ್ಟು, ವಾರಣಾ ಜಲಾಶಯವು ಶೇ 82ರಷ್ಟು, ರಾಧಾ ನಗರಿ ಜಲಾಶಯವು ಶೇ 96ರಷ್ಟು, ಕಣೇರ ಜಲಾಶಯವು ಶೇ 61ರಷ್ಟು, ಧೂಮ ಜಲಾಶಯವು ಶೇ 58ರಷ್ಟು, ಪಾಟಗಾಂವ ಜಲಾಶಯವು ಶೇ 81ರಷ್ಟು ಹಾಗೂ ಕಾಳಮ್ಮವಾಡಿ ಜಲಾಶಯವು ಶೇ 79ರಷ್ಟು ಭರ್ತಿಯಾಗಿದೆ.

ADVERTISEMENT

ರಾಜಾಪುರ ಬ್ಯಾರೇಜ್‌ನಿಂದ 1,02,000 ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯಿಂದ 29,920 ಕ್ಯುಸೆಕ್‌ ನೀರು ಸೇರಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1,31,920 ಕ್ಯುಸೆಕ್‌ ನೀರು ಸೇರಿಕೊಳ್ಳುತ್ತಿದೆ. ನದಿ ದಂಡೆಯ ಗದ್ದೆಗಳಿಗೆ ನೀರು ನಿಧಾನವಾಗಿ ನುಗ್ಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.