ADVERTISEMENT

ಬಡ ಜನರಿಗೆ ‘ಧರ್ಮವಾಹಿನಿ’ ನೆರವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 6:49 IST
Last Updated 12 ಜೂನ್ 2021, 6:49 IST
ಯಲ್ಲಮ್ಮನಗುಡ್ಡದ ಕುಷ್ಠರೋಗಿಗಳ ಕಾಲೊನಿಯಲ್ಲಿ ‘ಅಡವಿಸಿದ್ದೇಶ್ವರ ಧರ್ಮವಾಹಿನಿ’ಯಿಂದ ದಿನಸಿ ಕಿಟ್ ಮೊದಲಾದವುಗಳನ್ನು ಅಮರಸಿದ್ದೇಶ್ವರ ಸ್ವಾಮೀಜಿ ಶುಕ್ರವಾರ ವಿತರಿಸಿದರು
ಯಲ್ಲಮ್ಮನಗುಡ್ಡದ ಕುಷ್ಠರೋಗಿಗಳ ಕಾಲೊನಿಯಲ್ಲಿ ‘ಅಡವಿಸಿದ್ದೇಶ್ವರ ಧರ್ಮವಾಹಿನಿ’ಯಿಂದ ದಿನಸಿ ಕಿಟ್ ಮೊದಲಾದವುಗಳನ್ನು ಅಮರಸಿದ್ದೇಶ್ವರ ಸ್ವಾಮೀಜಿ ಶುಕ್ರವಾರ ವಿತರಿಸಿದರು   

ಉಗರಗೋಳ (ಸವದತ್ತಿ ತಾ): ‘ಕೊರೊನಾ ಸೋಂಕಿನಿಂದ ಬಡ ಕುಟುಂಬಗಳು ಜೀವನ ನಿರ್ವಹಣೆಗೆ ಪರಿತಪಿಸುತ್ತಿವೆ. ಅವರಿಗೆ ತಕ್ಕಮಟ್ಟಿಗಾದರೂ ನೆರವಾಗಲು ಶ್ರಮಿಸುತ್ತಿದ್ದೇವೆ’ ಎಂದು ಗೋಕಾಕ ತಾಲ್ಲೂಕು ಕುಂದರಗಿಯ ಅಡವಿ ಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಕುಷ್ಠ ರೋಗಿಗಳ ಕಾಲೊನಿಯಲ್ಲಿ ಅಡವಿಸಿದ್ದೇಶ್ವರ ಧರ್ಮವಾಹಿನಿ ವತಿಯಿಂದ ಶುಕ್ರವಾರ ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಅವರ 47ನೇ ಹುಟ್ಟುಹಬ್ಬ ಅಂಗವಾಗಿ ಕುಂದರಗಿಯ ಅಮರಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ದಿನಸಿ ಹಾಗೂ ಆಹಾರ ಕಿಟ್, ಹಾಸಿಗೆ, ಹೊದಿಕೆ, ಬಟ್ಟೆಗಳು ಹಾಗೂ ನೀರಿನ ಬಾಟಲಿಗಳನ್ನು ವಿತರಿಸಿ ಮಾತನಾಡಿದರು.

‘ಲಾಕ್‌ಡೌನ್‌ದಿಂದ ಸಂಕಷ್ಟದಲ್ಲಿರುವ ಬಡ ಕುಟುಂಬಗಳು ಸೇರಿದಂತೆ ನಿರ್ಗತಿಕರನ್ನು ಗುರುತಿಸಿ ಅಡವಿಸಿದ್ದೇಶ್ವರ ಧರ್ಮವಾಹಿನಿಯಿಂದ ಸೇವೆ ಮಾಡಲಾಗುತ್ತಿದೆ’ ಎಂದರು.

ADVERTISEMENT

ಕಲಾವಿದ ಸಂಜು ಬಸಯ್ಯ, ಪ್ರಜಾರಿ ಗೋವಿಂದ ಚುಳಕಿ, ಮಹೇಂದ್ರ ಪತ್ತಾರ, ರಾಜು ದಾಸಗೋಳ, ವಿನೋದ ಅಂಕಲಗಿ, ವಿಜಯ ಚರಲಿಂಗಮಠ, ಪ್ರಜ್ವಲ್ ಅಷ್ಟಗಿಮಠ, ಬಿ.ಬಿ. ಹುಲಿಗೊಪ್ಪ, ಶ್ರೀಶೈಲ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.