ADVERTISEMENT

ಹೆಸ್ಕಾಂ | ಹರಿದಾಡಿದ ಲಂಚ ಪಡೆದ ವಿಡಿಯೊ; ಎಇಇ ಅಮಾನತು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 3:03 IST
Last Updated 3 ಸೆಪ್ಟೆಂಬರ್ 2025, 3:03 IST
<div class="paragraphs"><p>ಅಮಾನತು</p></div>

ಅಮಾನತು

   

ಕಾಗವಾಡ: ಹೆಸ್ಕಾಂ ಉಗಾರ ಖುರ್ದ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ದುರ್ಯೋಧನ ಮಾಳಿ ಎಂಬುವರು ರೈತರೊಬ್ಬರಿಂದ ಲಂಚ ಪಡೆದಿದ್ದಾರೆ ಎನ್ನಲಾದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ಹರಿದಾಡಿದ ಬೆನ್ನಲ್ಲೇ ದುರ್ಯೋಧನ ಮಾಳಿ ಅವರನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ಇಲಾಖೆ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಸ್ಕಾಂ ಜಿಲ್ಲಾ ಇನ್‌ಚಾರ್ಜ್‌ ಚೀಫ್‌ ಪ್ರವೀಣಕುಮಾರ ಚಿಕ್ಕಾಡೆ, ‘ಭಾನುವಾರ ವಿಡಿಯೊ ಗಮನಿಸಿದ್ದೇವೆ. ಸೋಮವಾರ ಅಮಾನತು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಶಿರುಗುಪ್ಪಿಯ ರೈತ ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್‌ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ₹3 ಸಾವಿರ ಲಂಚ ಪಡೆಯುವಾಗ ರೈತರೆ ವಿಡಿಯೊ ಮಾಡಿದ್ದಾರೆ. ಅಧಿಕಾರಿ ಟೇಬಲ್‌ ಮೇಲೆ ಕುಳಿತು ಹಣ ಎಣಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ವಿಡಿಯೊದಲ್ಲಿದೆ. ಈ ತಕ್ಷಣಕ್ಕೆ ನಿಮ್ಮ ಕೆಲಸ ಮಾಡಿಸಿ ಕೊಡುತ್ತೇನೆ ಎಂದು ಅಧಿಕಾರಿ ಹೇಳಿದ ಮಾತುಗಳೂ ವಿಡಿಯೊದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.