ADVERTISEMENT

ನಿರಂತರ ಮಳೆ | ಹಿಡಕಲ್ ಜಲಾಶಯದಲ್ಲಿ 2,135 ಅಡಿ ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 13:52 IST
Last Updated 26 ಜೂನ್ 2025, 13:52 IST
ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದಲ್ಲಿ 2,135 ಅಡಿ ನೀರು ಸಂಗ್ರಹವಾಗಿದೆ
ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದಲ್ಲಿ 2,135 ಅಡಿ ನೀರು ಸಂಗ್ರಹವಾಗಿದೆ   

ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಾಲ್ಲೂಕಿನ ಘಟಪ್ರಭಾ ನದಿಗೆ ಗುರುವಾರ 30,300 ಕ್ಯೂಸೆಕ್ ಒಳಹರಿವು ಇರುವುದರಿಂದ ಡ್ಯಾಂನ ನೀರಿನ ಮಟ್ಟ 2135.150 ಅಡಿ ಇದೆ.

ಹೋದ ವರ್ಷ ಇದೆ ಸಮಯದಲ್ಲಿ 2096.700 ಅಡಿ ಇತ್ತು. ಹೋದ ವರ್ಷದ ಒಳಹರಿವು ಕೇವಲ 1,740 ಕ್ಯೂಸೆಕ್ ಇತ್ತು.
ಈ ವರ್ಷ ಮುಂಗಾರು ಮಳೆ ಬೇಗನೆ ಪ್ರಾರಂಭವಾಗಿರುವುದರಿಂದ ನದಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತಿದೆ ಎಂದು ನೀರಾವರಿ ನಿಗಮದ ಸಿಬಿಸಿ2 ಎಇಇ ಜಗದೀಶ್ ಬಿ.ಕೆ.ಹೇಳಿದರು.

ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಲ್ಲಿ ಜುಲೈ ತಿಂಗಳಲ್ಲೆ ಡ್ಯಾಂ ಭರ್ತಿಯಾಗುವ ಸಾಧ್ಯತೆಯಿದೆ ಎಂದು ಪತ್ರಿಕೆಗೆ ತಿಳಿಸಿದರು.

ADVERTISEMENT

ಹಿರಣ್ಯಕೇಶಿ ನದಿಯ ಒಳಹರಿವು ಕೂಡಾ ಹೆಚ್ಚಾಗಿದ್ದು, ನದಿ ಪಾತ್ರದ ಹೊಲಗಳಲ್ಲಿ ನೀರು ನುಗ್ಗಿ, ಸೋಯಾಬೀನ ಮತ್ತು ಕಬ್ಬು ಬೆಳೆಗಳು ಜಲಾವೃತಗೊಂಡಿವೆ. ಮಳೆ ನಿರಂತರ ಮುಂದುವರೆದರೆ ಸೋಯಾಬೀನ ಬೆಳೆ ಕೈಗೆ ನಿಲುಕುವುದಿಲ್ಲ ಎಂದು ಬಡಕುಂದ್ರಿ ರೈತ ಮಲ್ಲಿಕಾರ್ಜುನ ಗುಂಡಕಲ್ಲಿ ತಿಳಿಸಿದರು.

ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಗರಿಷ್ಟ 2175 ಅಡಿ ಪೈಕಿ ಗುರುವಾರ (ಜೂ.26ರಂದು) 2135 ಅಡಿ ನೀರು ಸಂಗ್ರಹವಾದ ದೃಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.