ADVERTISEMENT

ಜನವರಿ 31ರಂದು ಹುಕ್ಕೇರಿಯಲ್ಲಿ ‘ವಿಶಾಲ ಹಿಂದೂ ಸಮ್ಮೇಳನ’

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 3:00 IST
Last Updated 13 ಜನವರಿ 2026, 3:00 IST
ಪೃಥ್ವಿ ಕತ್ತಿ
ಪೃಥ್ವಿ ಕತ್ತಿ   

ಹುಕ್ಕೇರಿ: ಪಟ್ಟಣದಲ್ಲಿ ಜ.31 ರಂದು ಮಧ್ಯಾಹ್ನ 2 ಗಂಟೆಗೆ ವಿಶ್ವರಾಜ ಭವನದಲ್ಲಿ ‘ವಿಶಾಲ ಹಿಂದೂ ಸಮ್ಮೇಳನ’ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

ಸೋಮವಾರ ಸಂಘಟನಾ ಪೂರ್ವಭಾವಿ ಸಭೆಯ ಬಳಿಕ ಪ್ರಜಾವಾಣಿ ಜತೆ ಮಾತನಾಡಿದ ಅವರು, ಅಂದು ಮಧ್ಯಾಹ್ನ 3 ಗಂಟೆಗೆ ಅಡವಿ ಸಿದ್ಧೇಶ್ವರ ಮಠದಿಂದ ಶೋಭಾ ಯಾತ್ರೆ ಮತ್ತು ಕುಂಭ ಮೇಳದ ಮೆರವಣಿಗೆ ಹಳೆ ಮತ್ತು ಹೊಸ ಬಸ್ ನಿಲ್ದಾಣ ಬಳಸಿಕೊಂಡು ಬೈಪಾಸ್ ರಸ್ತೆಯ ಮೂಲಕ ವಿಶ್ವರಾಜ ಭವನ ತಲುಪುವುದು. ಸಭೆಯಾಗಿ ಮಾರ್ಪಟ್ಟ ಬಳಿಕ ಮುಖ್ಯ ಸಮಾರಂಭ ಜರುಗುವುದು. ಮೆರವಣಿಗೆಯಲ್ಲಿ ಸ್ಥಳೀಯ ಜನಪದ ಕಲಾವಿದರು, ವಾದ್ಯಮೇಳದವರು, ಡೊಳ್ಳು ಕುಣಿತದವರು ಸೇರಿದಂತೆ ಎಲ್ಲ ಸಮುದಾಯದ ಜನರು ಪಾಲ್ಗೊಳ್ಳುವರು ಎಂದರು.

ಹಿರಿಯ ವಕೀಲರಾದ ಆರ್.ವಿ.ಜೋಶಿ, ಪಿ.ಎಸ್.ಮುತಾಲಿಕ, ಮುಖಂಡರಾದ ಮಹಾವೀರ ನಿಲಜಗಿ, ಸತ್ಯಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಕಲಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯ ಬಳಿಕ ಆಗಮಿಸಿದ ಎಲ್ಲರಿಗೂ ಅಲ್ಪ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.